Wednesday, June 24, 2026
Homeತಾಜಾ ಸುದ್ದಿಬಸ್ ‌ನಿಲ್ದಾಣದಲ್ಲೇ ಮೂವರು ಯುವಕರಿಂದ ನಮಾಜ್!

ಬಸ್ ‌ನಿಲ್ದಾಣದಲ್ಲೇ ಮೂವರು ಯುವಕರಿಂದ ನಮಾಜ್!

- Advertisement -
- Advertisement -

ಶಿವಮೊಗ್ಗ: ಬಸ್ ‌ನಿಲ್ದಾಣದಲ್ಲೇ ಮೂವರು ಮುಸ್ಲಿಂ ಯುವಕರು ನಮಾಜ್ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಬಸ್ ನಿಲ್ದಾಣದಲ್ಲಿ ನಡೆದಿದೆ.

ಬಸ್ ನಿಲ್ದಾಣದಲ್ಲಿ ಮೂರು ಮಂದಿ ನಮಾಜ್ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೋಮವಾರ ಸಂಜೆ ಬೇರೆ ಊರಿನಿಂದ ಬಂದಿದ್ದ ಯುವಕರು ಬಸ್ ನಿಲ್ದಾಣದಲ್ಲಿ ನಮಾಜ್ ಮಾಡಿದ್ದಾರೆ ಎಂದು ಹೇಳಲಾಗಿದೆ.

ನಮಾಜ್ ಬಳಿಕ ಮತ್ತೆ ಬಸ್ ಮೂಲಕ ಯುವಕರು ಪ್ರಯಾಣ ಬೆಳೆಸಿದ್ದು, ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Latest News

error: Content is protected !!