Wednesday, June 3, 2026
Homeಕರಾವಳಿಮಂಗಳೂರುಮಂಗಳೂರು; ಪಣಂಬೂರು ಬೀಚ್ ನಲ್ಲಿ ಮೂವರು ಯುವಕರು ನೀರುಪಾಲು

ಮಂಗಳೂರು; ಪಣಂಬೂರು ಬೀಚ್ ನಲ್ಲಿ ಮೂವರು ಯುವಕರು ನೀರುಪಾಲು

- Advertisement -
- Advertisement -

ಮಂಗಳೂರು: ಮೂವರು ಯುವಕರು ನೀರುಪಾಲಾಗಿರುವ ಘಟನೆ ಪಣಂಬೂರು ಬೀಚ್ ನಲ್ಲಿ ಸಂಭವಿಸಿದೆ.

ಮಿಲನ್(20), ಲಿಖಿತ್(18) ಹಾಗೂ ನಾಗರಾಜ್ (24) ಸಮುದ್ರಪಾಲಾಗಿರುವ ಯುವಕರಾಗಿದ್ದು, ಸ್ಥಳೀಯ ಮೀನುಗಾರರು ಹಾಗೂ ಜೀವರಕ್ಷಕ ದಳದಿಂದ ಯುವಕರ ಪತ್ತೆ ಕಾರ್ಯ ನಡೆದಿದೆ.

ಯುವಕರ ಪೈಕಿ ಮಿಲನ್ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದು, ಲಿಖಿತ್ ಕೈಕಂಬದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ.

ಮತ್ತೋರ್ವ ಯುವಕ ನಾಗರಾಜ್ ಕಂಪೆನಿಯೊಂದರಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!