Wednesday, June 24, 2026
Homeಕರಾವಳಿಉಪ್ಪಿನಂಗಡಿ: ನಿರ್ಮಾಣ ಹಂತದ ಮನೆಯ ಮೇಲಿನಿಂದ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

ಉಪ್ಪಿನಂಗಡಿ: ನಿರ್ಮಾಣ ಹಂತದ ಮನೆಯ ಮೇಲಿನಿಂದ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ಉಪ್ಪಿನಂಗಡಿ: ನಿರ್ಮಾಣ ಹಂತದ ಮನೆಯ ಮೇಲಿನಿಂದ ಕಾಲು ಜಾರಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆಉಪ್ಪಿನಂಗಡಿಯ ಕರ್ವೇಲು ಎಂಬಲ್ಲಿ ನಡೆದಿದೆ.ಕರ್ವೇಲು ನಿವಾಸಿ ಮುಹಮ್ಮದ್ ಮುಸ್ತಫಾ ಮೃತ ದುರ್ದೈವಿ.

ಮುಸ್ತಫಾ ಕರ್ವೇಲ್ ನಲ್ಲಿ ಮನೆ ಕಟ್ಟಿಸುತ್ತಿದ್ದು, ಕಾರ್ಮಿಕರೊಂದಿಗೆ ಸೇರಿಕೊಂಡು ಸ್ವತಃ ಮನೆಯ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದರು. ಇಂದು ಬೆಳಗ್ಗೆ ಮನೆಯ ಮೇಲೇರಿ ಸಿಮೆಂಟ್ ಕಾಮಗಾರಿಗೆ ನೀರು ಹಾಕುತ್ತಿದ್ದಾಗ ಸಂದರ್ಭ ಕಾಲು ಜಾರಿ ಕೆಳಗಡೆ ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರು ಗರ್ಭಿಣಿ ಪತ್ನಿ, ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ.

- Advertisement -

Latest News

error: Content is protected !!