- Advertisement -
- Advertisement -
ಉಡುಪಿ;ಗಾಂಜಾ ಮಾರಾಟ ಪ್ರಕರಣದ ಆರೋಪಿಗೆ 3 ವರ್ಷ ಕಠಿಣ ಶಿಕ್ಷೆ ವಿಧಿಸಿ ಉಡುಪಿ ಜಿಲ್ಲಾ ಪ್ರಧಾನ ಮತ್ತು ಜಿಲ್ಲಾ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಉಡುಪಿ ತಾಲೂಕಿನ ಹೂಡೆಯ ಅರ್ಫನ್(27)ಗೆ ಮೂರು ವರ್ಷಗಳ ಜೈಲು ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಅರ್ಫನ್ ಗೆ ಗಾಂಜಾ ಮಾರಾಟದ ವೇಳೆ ಉಡುಪಿ ಜಿಲ್ಲಾ ಸೆನ್ ಅಪರಾಧ ಪೊಲೀಸರು 2020ರ ಸೆ.5ರಂದು ಬಂಧಿಸಿದ್ದರು.ಬಂಧಿತನಿಂದ 1 ಕೆಜಿ,48 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದರು.
ಅಂದಿನ ಸೆನ್ ಅಪರಾಧ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮ ಚಂದ್ರ ನಾಯಕ್ ಈ ಪ್ರಕರಣದ ದೂರುದಾರರಾಗಿದ್ದು, ಎಸ್ಸೈ ಲಕ್ಷ್ಮಣ ಪ್ರಕರಣದಲ್ಲಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಇದೀಗ ನ್ಯಾಯಾಧೀಶ ಶಾಂತವೀರ ಶಿವಪ್ಪ ಅವರ ಪೀಠ ಆರೋಪ ಸಾಬೀತು ಹಿನ್ನೆಲೆ ಅರ್ಫನ್‌ಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 30 ಸಾವಿರ ರೂ.ದಂಡ ಮತ್ತು ತಪ್ಪಿದಲ್ಲಿ 6 ತಿಂಗಳ ಸರಳ ಕಾರಾಗೃಹ ವಾಸ ವಿಧಿಸಿ ಆದೇಶ ನೀಡಿದೆ.
- Advertisement -