- Advertisement -
![]()
- Advertisement -
ಬ್ರಹ್ಮಾವರ: ಇಲ್ಲಿಗೆ ಸಮೀಪದ ಸಾಯಿಬ್ರಕಟ್ಟೆ ಎಂಬಲ್ಲಿ ಡಿ.5ರ ಭಾನುವಾರದಂದು ಸರಕು ಸಾಗಣೆ ವಾಹನ, ಕಾರು, ಬೈಕ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಒಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದರು.

ಮೃತರನ್ನು ಮಧುವನ ನಿವಾಸಿ ಸುರೇಶ ಮರಕಾಲ ಎಂದು ಗುರುತಿಸಲಾಗಿದೆ. ಮೀನು ಹೊತ್ತೊಯ್ದು ಜೆಸಿಬಿಯನ್ನು ಹಿಂದಿಕ್ಕಲು ಮುಂದಾದ ಸರಕು ಸಾಗಣೆ ವಾಹನ ಎದುರುಗಡೆಯಿಂದ ಬರುತ್ತಿದ್ದ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನದ ಎಡಭಾಗದಲ್ಲಿ ಕುಳಿತಿದ್ದ ಸುರೇಶ ಮರಕಾಲ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸರಕು ಸಾಗಣೆ ವಾಹನದ ಚಾಲಕನೂ ಗಾಯಗೊಂಡಿದ್ದಾನೆ.

ಈ ನಡುವೆ ಬೈಕ್ ಸವಾರನೊಬ್ಬ ಕೂಡ ಈ ವಾಹನಗಳ ನಡುವೆ ಸಿಕ್ಕಿಹಾಕಿಕೊಂಡಿದ್ದಾನೆ. ಆತನ ಕಾಲಿಗೆ ತೀವ್ರ ಗಾಯಗಳಾಗಿವೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮತ್ತಿಬ್ಬರು ಗಾಯಗೊಂಡಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


