Thursday, June 25, 2026
Homeಕರಾವಳಿಬೆಳ್ತಂಗಡಿಯ ಕಾನರ್ಪ ಸಮೀಪದ ರಬ್ಬರ್ ತೋಟವೊಂದರಲ್ಲಿ ದೊಡ್ಡ ಗಾತ್ರದ ಮೊಸಳೆ ಪ್ರತ್ಯಕ್ಷ !

ಬೆಳ್ತಂಗಡಿಯ ಕಾನರ್ಪ ಸಮೀಪದ ರಬ್ಬರ್ ತೋಟವೊಂದರಲ್ಲಿ ದೊಡ್ಡ ಗಾತ್ರದ ಮೊಸಳೆ ಪ್ರತ್ಯಕ್ಷ !

- Advertisement -
- Advertisement -

ಬೆಳ್ತಂಗಡಿಯ ರಬ್ಬರ್ ತೋಟವೊಂದರಲ್ಲಿ ದೊಡ್ಡ ಗಾತ್ರದ ಮೊಸಳೆ ಪತ್ತೆಯಾಗಿದೆ. ಸುಮಾರು 8 ರಿಂದ 9 ಅಡಿ ಉದ್ದವಾಗಿದ್ದು ತಾಲೂಕಿನ ಕಡಿರುದ್ಯಾವರ ಗ್ರಾಮದ ಕಾನರ್ಪ ಸಮೀಪದ ಕುದೂರು ಎಂಬಲ್ಲಿ ಕಂಡು ಬಂದಿದೆ.

ಇಲ್ಲಿನ ಕಡಿರುದ್ಯಾವರ ಗ್ರಾಮದ ಕಾನರ್ಪ ಕುದೂರು ನಿವಾಸಿ ಸದಾಶಿವ ಎಂಬುವವರ ರಬ್ಬರ್ ತೋಟ ಸಮೀಪದ ತೋಡಿನಲ್ಲಿ ಮೊಸಳೆ ಕಂಡು ಬಂದಿದೆ. ಸಂತೋಷ್ ಎಂಬುವರರು ರಬ್ಬರ್ ತೋಟದ ಸೊಪ್ಪು ಸ್ವಚ್ಛಗೊಳಿಸುವ ವೇಳೆ ಮೊಸಳೆ ಕಂಡರು. ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ಎರಡು ವರ್ಷಗಳ ಬಳಿಕ ಬೆಳ್ತಂಗಡಿ ತಾಲೂಕಿನಲ್ಲಿ ಎರಡನೆ ಬಾರಿಗೆ ಮೊಸಳೆಯೊಂದು ಪತ್ತೆಯಾಗಿದೆ. 2019ರಲ್ಲಿ ಧರ್ಮಸ್ಥಳ ಗ್ರಾಮದ ದೊಂಡೋಲೆ ಸಮೀಪ ಪಾಳು ಬಾವಿಯಲ್ಲಿ ಮೊಸಳೆ ಪತ್ತೆಯಾಗಿತ್ತು ಆ ಬಳಿಕ ಅರಣ್ಯ ಇಲಾಖೆಯ ಕಾರ್ಯಚರಣೆಯಿಂದ ಮೊಸಳೆಯನ್ನು ಸಂರಕ್ಷಿಸಿ ಚಾರ್ಮಾಡಿ ರಕ್ಷಿತಾರಣ್ಯಕ್ಕೆ ಬಿಡಲಾಗಿತ್ತು .

ಕಳೆದ ತಿಂಗಳು ಚಾರ್ಮಾಡಿ ಚಿಕ್ಕಮಗಳೂರು ಭಾಗದಲ್ಲಿ ಅತೀ ಹೆಚ್ಚು ಮಳೆ ಆದ್ದರಿಂದ ಆಹಾರ ಹುಡುಕುತ್ತಾ ಮೊಸಳೆ ಕೆಳಭಾಗಕ್ಕೆ ಬಂದಿರುವ ಸಾಧ್ಯತೆ ಇದೆ.

ಮೊಸಲೆ ಹಿಡಿದು ಪಿಕಪ್ ವಾಹನದಲ್ಲಿ ಅರಣ್ಯ ಇಲಾಖೆಯವರು ಮುಂಡಾಜೆ ಗೋ ಆಸ್ಪತ್ರೆಗೆ ಹೋದಾಗ ಆಸ್ಪತ್ರೆ ರಜೆ ಇದ್ದು ನಂತರ ಅಧಿಕಾರಿಗಳು ಮೊಸಳೆಯನ್ನು ಪರಿಶೀಲನೆ ನಡೆಸಿದ್ದು ಯಾವುದೇ ಗಾಯವಾಗಿಲ್ಲ . ಇನ್ನು ಅದನ್ನು ಎಲ್ಲಿ ಸ್ಥಳೀಯದಲ್ಲಿ ಎಲ್ಲೂ ಬಿಡಲು ಸಾರ್ವಜನಿಕರು ಬಿಡುತ್ತಿಲ್ಲ ಎಂದು ಗೊತ್ತಾಗದೆ ಇನ್ನೂ ಮಂಗಳೂರು ಪಿಲಿಕುಳಕ್ಕೆ ಬಿಡಲು ಮೇಲಾಧಿಕಾರಿಗಳ ಅದೇಶಕ್ಮೆ ಅರಣ್ಯ ಇಲಾಖೆ ಅಧಿಕಾರಿಗಳು ವಾಹನದಲ್ಲಿ ಕುಳಿತು ಕಾಯುತ್ತಿದ್ದಾರೆ.

ಮೊಸಳೆಯನ್ನು ರಕ್ಷಿಸಿ ಮತ್ತೆ ದೂರದ ಅರಣ್ಯ ಭಾಗದಲ್ಲಿ ಬಿಡುವ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂಬ ಮಾಹಿತಿ ಇದೆ.

- Advertisement -

Latest News

error: Content is protected !!