Friday, May 3, 2024
Homeಅಪರಾಧಕೇರಳದ ಮೂವರು ಹೋಟೆಲ್ ನಲ್ಲಿ ಶವವಾಗಿ ಪತ್ತೆ; ಸಾವಿಗೆ ಮಾಟಮಂತ್ರವೇ ಕಾರಣ?

ಕೇರಳದ ಮೂವರು ಹೋಟೆಲ್ ನಲ್ಲಿ ಶವವಾಗಿ ಪತ್ತೆ; ಸಾವಿಗೆ ಮಾಟಮಂತ್ರವೇ ಕಾರಣ?

spot_img
- Advertisement -
- Advertisement -

ಕೇರಳದ ದಂಪತಿ ಹಾಗೂ ಅವರ ಸ್ನೇಹಿತೆ ಅರುಣಾಚಲ ಪ್ರದೇಶದ ಹೊಟೇಲ್‌ ವೊಂದರಲ್ಲಿ ಅನುಮಾನಾಸ್ಪದವಾಗಿ‌ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮೃತರಾದವರು ಕೊಟ್ಟಾಯಂ ಜಿಲ್ಲೆಯ ಆಯುರ್ವೇದ ವೈದ್ಯರಾದ ನವೀನ್ ಥಾಮಸ್, ಅವರ ಪತ್ನಿ ದೇವಿ ಬಿ ಹಾಗೂ ಅವರ ಸ್ನೇಹಿತೆ ಶಾಲಾ ಶಿಕ್ಷಕಿ, ತಿರುವನಂತಪುರಂ ನಿವಾಸಿ ಆರ್ಯ ಬಿ ನಾಯರ್ (29) ಎಂದು ಗುರುತಿಸಲಾಗಿದೆ. 

ಜಿಲ್ಲಾ ಪೊಲೀಸ್ ತಂಡ ಮತ್ತು ವಿಧಿವಿಜ್ಞಾನ ತಜ್ಞರು ಘಟನಾ ಸ್ಥಳಕ್ಕೆ ತೆರಳಿ, ಸಾಕ್ಷ್ಯಗಳನ್ನು ಸಂಗ್ರಹಿಸುವ ಮೂಲಕ ತನಿಖೆ ಆರಂಭಿಸಿದ್ದಾರೆ.

ಘಟನೆಯ ವಿವರ: ಈ ಮೂವರು ಹೊಟೇಲ್‌ ಗೆ  ಮಾರ್ಚ್‌ 28 ರಂದು ಚೆಕ್‌ ಇನ್‌ ಆಗಿದ್ದರು. ಹೋಟೆಲ್ ಸಿಬ್ಬಂದಿ ಗಮನಿಸಿದಂತೆ ಚೆಕ್‌ ಇನ್‌ ಆದಾಗಿನಿಂದಲೂ ಮೂವರು ಕೋಣೆಯ ಹೊರಗೆ ಬಾರದಿದ್ದು, ಸಿಬ್ಬಂದಿ ಏ.1 ರಂದು ಅವರ ರೂಮ್‌ ನತ್ತ ಹೋಗಿದ್ದು, ಅಲ್ಲಿ ಮೂವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಆರ್ಯ ಬಿ ನಾಯರ್ ಬೆಡ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರ ಮಣಿಕಟ್ಟಿನ ಗಾಯವಾಗಿದೆ. ದೇವಿ ಅವರ ಕುತ್ತಿಗೆ ಮತ್ತು ಮಣಿಕಟ್ಟಿಗೆ ತೀವ್ರ ಗಾಯಗಳಾಗಿದ್ದು, ಅವರು ನೆಲದ ಮೇಲೆ ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನವೀನ್ ಥಾಮಸ್ ಸ್ನಾನಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರ ಮಣಿಕಟ್ಟಿನ ಮೇಲೆ ಗಾಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವಿವಾಹಿತ ದಂಪತಿ ಮತ್ತು ಮಹಿಳೆಯ ಮೂವರ ನಡವಳಿಕೆಯಲ್ಲಿ ಅಸಹಜತೆ ಇದೆ ಎಂದು ತೋರುತ್ತಿದೆ ಆದರೆ ಅವರ ಮೊಬೈಲ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಪರಿಶೀಲಿಸುವವರೆಗೆ ಯಾವುದನ್ನೂ ನಿರ್ಣಾಯಕವಾಗಿ ಹೇಳಲಾಗುವುದಿಲ್ಲ ಎಂದು ತಿರುವನಂತಪುರಂ ನಗರ ಪೊಲೀಸ್ ಕಮಿಷನರ್ ಸಿ ನಾಗರಾಜು ಹೇಳಿದ್ದಾರೆ.

ಇನ್ನು ಈ ಘಟನೆಯ ಹಿಂದೆ ಮಾಟಮಂತ್ರ ವಿಚಾರಗಳಿದೆ ಎಂದು ಹೇಳಲಾಗುತ್ತಿದೆ. ಆದರೆ ಪೊಲೀಸರು ಸಾಕ್ಷ್ಯವನ್ನೆಲ್ಲಾ ತರಿಸಿಕೊಂಡು ತನಿಖೆ ಮಾಡುತ್ತಿದ್ದು, ಇದರ ಬಳಿಕಷ್ಟೇ ಮೂವರು ಯಾಕೆ ಹೊಟೇಲ್‌ಗೆ ಹೋದರು, ಇದಕ್ಕೆ ಕಾರಣವೇನು, ಹೇಗೆ ಸಾವನ್ನಪ್ಪಿದ್ದಾರೆ ಎನ್ನುವುದನ್ನು ಹೇಳಲು ಸಾಧ್ಯ ಎಂದು ಪೊಲೀಸರು ಹೇಳಿದ್ದಾರೆ.

ದಂಪತಿಗೆ 13 ವರ್ಷಗಳ ಹಿಂದೆ ವಿವಾಹವಾಗಿದ್ದು, ಆಗಾಗ ತಂದೆ-ತಾಯಿಯನ್ನು ಭೇಟಿ ಮಾಡಲು ಬರುತ್ತಿದ್ದರು. ಇನ್ನು ಆರ್ಯ ಅವರ ಸಂಬಂಧಿಕರು ತಿರುವನಂತಪುರಂ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಆ ಬಳಿಕ ಕೇರಳದ ಪೊಲೀಸರು ನವೀನ್ ಮತ್ತು ದೇವಿಯೊಂದಿಗೆ ಆರ್ಯ ಅರುಣಾಚಲ ಪ್ರದೇಶಕ್ಕೆ ಹೋಗುವ ಮೊದಲು ಗುವಾಹಟಿಗೆ ತೆರಳಿದ್ದರು ಎಂದು ಪೊಲೀಸರು ಹೇಳಿದ್ದಾರೆ.

- Advertisement -
spot_img

Latest News

error: Content is protected !!