Monday, May 6, 2024
Homeಅಪರಾಧಸರಕಾರದ ಯೋಜನೆ ಹೆಸರಲ್ಲಿ ವಂಚನೆ ಹೆಚ್ಚಳ; ಹಲವು ಪ್ರಕರಣಗಳು ದಾಖಲು

ಸರಕಾರದ ಯೋಜನೆ ಹೆಸರಲ್ಲಿ ವಂಚನೆ ಹೆಚ್ಚಳ; ಹಲವು ಪ್ರಕರಣಗಳು ದಾಖಲು

spot_img
- Advertisement -
- Advertisement -

ಕೋಟ: ಇಲ್ಲಿನ  ಪೊಲೀಸ್‌ ಠಾಣೆ ವ್ಯಾಪ್ತಿಯ ಬಿದ್ಕಲ್‌ಕಟ್ಟೆಯ ಹರ್ಷವರ್ಧನ ಅವರು ಸಾಮಾಜಿಕ ಜಾಲತಾಣದಿಂದ ಸರಕಾರದ ಯೋಜನೆ ಹೆಸರಲ್ಲಿ ವಂಚನೆಗೊಳಗಾಗಿ ಹಣವನ್ನು ಕಳೆದುಕೊಂಡ ಘಟನೆ ನಡೆದಿದೆ. ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ವಂಚನೆ ಜಾಲಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹರ್ಷವರ್ಧನ ಅವರಿಗೆ ಇತ್ತೀಚೆಗೆ ಫೇಸು ಬುಕ್‌ನಿಂದ ಪಿಎಂ ಜನಧನ್‌ ಯೋಜನೆ ಹೆಸರಲ್ಲಿ ನಂಬರ್‌ ಪ್ಲೇಟ್‌ ಉದ್ಯೋಗ ಮಾಡಲು ಪಿಎಂವೈಜಿ ಯೋಜನೆಯಡಿ ಸಬ್ಸಿಡಿ ಲೋನ್‌ ಮಾಡಿಕೊಡುವುದಾಗಿ ಸಂದೇಶ ಬಂದಿತ್ತು. ಅದರಂತೆ ಸಂಪರ್ಕಿಸಿದಾಗ ಗುರುತಿನ ದಾಖಲೆಗಳನ್ನು ಪಡೆದು ಸಾಲ ಮಂಜೂರಾತಿ ಪ್ರಕ್ರಿಯೆಗಳಿಗೆ ಎಂದು 98,551 ರೂ.ಗಳನ್ನು ಆನ್‌ಲೈನ್‌ ಮೂಲಕ ವಂಚಕರು ಪಡೆದಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಕೊಲ್ಲೂರು ಸಮೀಪದ ಶ್ರೀಕಾಂತ್‌ ಅವರನ್ನು ಪ್ರಧಾನಮಂತ್ರಿ ಜನಧನ್‌ ಯೋಜನೆಯಡಿ ಸಾಲ ಕೊಡಿಸುವುದಾಗಿ ಆನ್‌ಲೈನ್‌ ಮೂಲಕ ಸಂಪರ್ಕಿಸಿದ್ದು, ದಾಖಲೆ ಪತ್ರಗಳನ್ನು ಪಡೆದು 1 ಲಕ್ಷ ರೂ.ಗೂ ಅಧಿಕ ಪಡೆಯಲಾಗಿದೆ.

ಮಂಗಳೂರಿನ ಶ್ರೀಧರ್‌ ಅವರಿಗೆ ಕರೆ ಮಾಡಿ ಸ್ವಂತ ಉದ್ಯೋಗಕ್ಕೆ ಸಬ್ಸಿಡಿ ಸಾಲ ನೀಡುವುದಾಗಿ ದಾಖಲೆ ಪಡೆದು ಸಾಲ ಮಂಜೂರಾಗಿರುವಂತೆ ನಕಲಿ ಪತ್ರ ಕಳುಹಿಸಿ ಮುಂಗಡವಾಗಿ 1 ಲಕ್ಷ ರೂ. ಪಡೆಯಲಾಗಿದೆ. ಈ ರೀತಿಯ ಹಲವು ಪ್ರಕರಣಗಳು ದಾಖಲಾಗುತ್ತಿವೆ.

- Advertisement -
spot_img

Latest News

error: Content is protected !!