Sunday, May 5, 2024
Homeತಾಜಾ ಸುದ್ದಿಮಂಗಳೂರು: ಇನ್ನೂ ಮೂರು ತಿಂಗಳ ನಂತರ ಪದವಿ ತರಗತಿ ಆರಂಭ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡರೂ...

ಮಂಗಳೂರು: ಇನ್ನೂ ಮೂರು ತಿಂಗಳ ನಂತರ ಪದವಿ ತರಗತಿ ಆರಂಭ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡರೂ ಕಾಯುವಿಕೆ ಅನಿವಾರ್ಯ

spot_img
- Advertisement -
- Advertisement -

ಮಂಗಳೂರು: ಮಾಸಾಂತ್ಯಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡರೂ ಪದವಿ ತರಗತಿಗೆ ಸೇರಬೇಕಾದರೆ ವಿದ್ಯಾರ್ಥಿಗಳು ಕನಿಷ್ಠ 3 ತಿಂಗಳು ಕಾಯಬೇಕು. ಯಾಕೆಂದರೆ ಮಂಗಳೂರು ವಿಶ್ವವಿದ್ಯಾ ನಿಲಯ ವ್ಯಾಪ್ತಿಯಲ್ಲಿ 2022-23ರ ಶೈಕ್ಷಣಿಕ ವರ್ಷ ಆರಂಭವಾಗುವುದು ಅಕ್ಟೋಬರ್ ಒಂದರಿಂದ!

ವಿ.ವಿ.ಯ 2021-22ನೇ ಶೈಕ್ಷಣಿಕ ವೇಳಾಪಟ್ಟಿ ಪ್ರಕಾರ 2, 4 ಮತ್ತು 6ನೇ ಸೆಮಿಸ್ಟರ್‌ನ ತರಗತಿ ಗಳು ಆ. 30ಕ್ಕೆ ಕೊನೆಗೊಳ್ಳಲಿವೆ. ಸೆ. 2ರಿಂದ ಪರೀಕ್ಷೆ. ಹೀಗಾಗಿ ಅಷ್ಟು ಸಮಯ ಹೊಸ ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ಸಿಗದು. ಒಂದು ವೇಳೆ ದಾಖಲಾತಿಯಾದರೂ 3 ತಿಂಗಳು ಕಲಿಕೆಯಿಂದ ದೂರ ವಿರಬೇಕಾಗುತ್ತದೆ.

ಸಾಮಾನ್ಯವಾಗಿ ಜೂನ್‌ನಲ್ಲಿ ಪದವಿ ತರಗತಿಗಳು ಆರಂಭ ವಾಗುತ್ತವೆ. ಆದರೆ ಕೊರೊನಾ ಕಾರಣ ಎರಡು ವರ್ಷಗಳಿಂದ ಶೈಕ್ಷಣಿಕ ವೇಳಾಪಟ್ಟಿಯೇ ಅದಲು ಬದಲಾಗಿದೆ. ಜೂನ್‌ನಲ್ಲಿ ಮುಗಿಯ ಬೇಕಿದ್ದ ಪದವಿ ತರಗತಿಗಳು ಈಗಲೂ ನಡೆಯುತ್ತಿವೆ. ಹೀಗಾಗಿ ಮುಂದಿನ 3 ತಿಂಗಳು ಕಾಲೇಜಿನಲ್ಲಿ ಹೊಸ ತರಗತಿಗೆ ಕೊಠಡಿ ಅಲಭ್ಯ ಮತ್ತು ಉಪನ್ಯಾಸಕರ ಕೊರತೆಯೂ ಆಗಲಿದೆ. ಇದರಿಂದಾಗಿ ಪದವಿ ಮೊದಲ ವರ್ಷದ ವಿದ್ಯಾರ್ಥಿಗಳು ಪಾಠಕ್ಕಾಗಿ ಕಾಯಲೇಬೇಕಾದ ಅನಿವಾರ್ಯ ಇದೆ. ಈ ಬಾರಿ ಅಕ್ಟೋಬರ್‌ನಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭವಾದರೆ ಮುಂದಿನ ವರ್ಷಕ್ಕೆ ಎಲ್ಲವೂ ಹಿಂದಿನಂತೆಯೇ ಸಹಜ ಸ್ಥಿತಿಗೆ ಬರಲಿವೆ.

- Advertisement -
spot_img

Latest News

error: Content is protected !!