Thursday, June 4, 2026
Homeಕರಾವಳಿಉಡುಪಿಪರ್ಕಳ: ಜೋರಾಗಿದೆ ಹುಚ್ಚು ನಾಯಿಗಳ ಹಾವಳಿ: ಭಯಭೀತರಾದ ಸಾರ್ವಜನಿಕರು

ಪರ್ಕಳ: ಜೋರಾಗಿದೆ ಹುಚ್ಚು ನಾಯಿಗಳ ಹಾವಳಿ: ಭಯಭೀತರಾದ ಸಾರ್ವಜನಿಕರು

- Advertisement -
- Advertisement -

ಪರ್ಕಳ: ಹುಚ್ಚು ನಾಯಿ ಹಾವಳಿಯಿಂದ ಮಣಿಪಾಲ ಸಮೀಪದ ಅನೇಕ ಕಡೆಗಳಲ್ಲಿ ಭಯದ ವಾತಾವರಣ ನಿರ್ಮಣ ಆಗಿದೆ. ಇಲ್ಲಿನ ಪರ್ಕಳ, ಶೆಟ್ಟಿ ಬೆಟ್ಟು, ಹೆರ್ಗ ಸುತ್ತಮುತ್ತ ಹುಚ್ಚುನಾಯಿಗಳ ಹಾವಳಿ ಜೋರಾಗಿದೆ.ಇಲ್ಲಿ ಹಲವರಿಗೆ ಹುಚ್ಚು ನಾಯಿ ಕಡಿದಿದ್ದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಆದಿಉಡುಪಿ ಪರಿಸರದಲ್ಲೂ ಹಲವರಿಗೆ ಹುಚ್ಚು ನಾಯಿ ಕಡಿದಿತ್ತು. ಬಳಿಕ ಅದನ್ನು ಕೊಲ್ಲಲಾಗಿತ್ತು. ಈಗ ಪರ್ಕಳ ಪರಸರದಲ್ಲೂ ಇದರ ಹಾವಳಿ ಜೋರಾಗಿದ್ದು ಸಾರ್ವಜನಿಕರು ಭಯಭೀತರಾಗಿದ್ದಾರೆ.

ನಗರಸಭೆ ಮತ್ತು ಆರೋಗ್ಯ ಇಲಾಖೆ ತಕ್ಷಣ ಇದಕ್ಕೆ ಕಡಿವಾಣ ಹಾಕುವ ಮೂಲಕ ಸಾರ್ವಜನಿಕರಿಗೆ ಆಗಬಹುದಾದ ತೊಂದರೆ ತಪ್ಪಿಸಬೇಕೆಂದು ಸ್ಥಳೀಯ ಸಮಾಜ ಸೇವಕ ಗಣೇಶ್ ರಾಜ್ ಸರಳಬೆಟ್ಟು ಒತ್ತಾಯಿಸಿದ್ದಾರೆ.

- Advertisement -

Latest News

error: Content is protected !!