Saturday, May 18, 2024
Homeತಾಜಾ ಸುದ್ದಿಮಂಗಳೂರು: ಗುಡಿಸಲು ಸಮೀಪವೇ ಮನೆ ನಿರ್ಮಾಣಕ್ಕೆ ತಡೆ: ಸ್ಥಳೀಯರೊಬ್ಬರು ಆಕ್ಷೇಪಿಸಿದ ಕಾರಣ ಕಾಮಗಾರಿ ಮೊಟಕು: ಸೋರುವ...

ಮಂಗಳೂರು: ಗುಡಿಸಲು ಸಮೀಪವೇ ಮನೆ ನಿರ್ಮಾಣಕ್ಕೆ ತಡೆ: ಸ್ಥಳೀಯರೊಬ್ಬರು ಆಕ್ಷೇಪಿಸಿದ ಕಾರಣ ಕಾಮಗಾರಿ ಮೊಟಕು: ಸೋರುವ ಮನೆಯಲ್ಲೇ ಗರ್ಭಿಣಿಗೆ ಆರೈಕೆ

spot_img
- Advertisement -
- Advertisement -

ಮಂಗಳೂರು: ಟರ್ಪಾಲ್‌ ಹೊದಿಕೆಯ ಗುಡಿಸಲು ಸಮೀಪವೇ ತಾತ್ಕಾಲಿಕ ಮನೆ ನಿರ್ಮಾಣ ಮಾಡಲು ಮುಂದಾದ ಕಳಾರದ ಬಡ ಕುಟುಂಬಕ್ಕೆ ಕಂದಾಯ ಇಲಾಖೆ, ಮನೆ ನಿರ್ಮಾಣ ಮಾಡದಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪ್ರಗತಿಯಲ್ಲಿದ್ದ ಕಾಮಗಾರಿ ಅರ್ಧಕ್ಕೆ ಮೊಟಕಾಗಿದೆ.

ದ.ಕ ಜಿಲ್ಲೆಯ ಕಡಬದ ಕುಟ್ರುಪ್ಪಾಡಿ ಗ್ರಾ.ಪಂ ವ್ಯಾಪ್ತಿಯ ಅಡ್ಕಾಡಿ ಚಂದ್ರಶೇಖರ ಅವರು ಹಲವು ವರ್ಷಗಳಿಂದ ಸರ್ಕಾರಿ ಸ್ವಾಧೀನದಲ್ಲಿರುವ ಜಾಗದಲ್ಲಿ ವಾಸಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಪ್ರಕೃತಿ ವಿಕೋಪ ಉಂಟಾಗಿ ಮನೆ ಮುರಿದು ಬಿದ್ದಿತ್ತು. ಹೀಗಾಗಿ ಟರ್ಪಾಲ್‌ ಹೊದಿಕೆಯ ಗುಡಿಸಲಿನಲ್ಲಿ ವಾಸವಾಗಿದ್ದರು. ಇದೀಗ ಕಂದಾಯ ಇಲಾಖೆಯ ಪರಿಹಾರ ಧನದಲ್ಲಿ ಮನೆ ನಿರ್ಮಿಸಲು ಮುಂದಾಗಿದ್ದು, ಸ್ಥಳೀಯ ವ್ಯಕ್ತಿಯೊಬ್ಬರು ಆಕ್ಷೇಪಿಸಿದ ಕಾರಣ ಸ್ಥಳಕ್ಕೆ ಆಗಮಿಸಿದ ಕಡಬ ತಹಸೀಲ್ದಾರ್‌ ಕಾಮಗಾರಿ ಸ್ಥಗಿತಗೊಳಿಸುವಂತೆ ಮೌಖಿಕ ಸೂಚನೆ ನೀಡಿದ್ದಾರೆ.

ಮುಸ್ಲಿಂ ದಫನ ಭೂಮಿಯನ್ನಾಗಿ ಕಾಯ್ದಿರಿಸುವಂತೆ ಸ್ಥಳೀಯ ಮಸೀದಿ ಆಡಳಿತ ಮಂಡಳಿ ಜಿಲ್ಲಾಕಾರಿಗಳಿಗೆ ಮನವಿ ಸಲ್ಲಿಸಿತ್ತು. ಈ ನಡುವೆ ತಮ್ಮ ಸ್ವಾಧೀನದ ಜಾಗಕ್ಕೆ ಹಕ್ಕು ಪತ್ರ ನೀಡುವಂತೆ ವಾಸವಿದ್ದ ಕುಟುಂಬವೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಿತ್ತು. ಆದರೆ, ತನಿಖೆ ವೇಳೆ ಮುಸ್ಲಿಂ ಧಪನ ಭೂಮಿ ಕಾಯ್ದಿರಿಸಿರುವುದು ಕಂಡು ಬರಲಿಲ್ಲ. ಪಹಣಿಯಲ್ಲಿಡಿ ವರ್ಗದ ದಫನದ ಬಗ್ಗೆ ಅಡಂಗಲ್‌ನಲ್ಲಿ ದಾಖಲಾಗಿತ್ತು. ಜಾಗ ಸ್ವಾಧೀನ ಹೊಂದಿದ್ದ ಕುಟುಂಬದ ದೈವಸ್ಥಾನವೂ ಇರುವುದು ಪತ್ತೆಯಾಗಿತ್ತು.

ಸ್ಥಳೀಯರೊಬ್ಬರು ಪೋನ್‌ ಮೂಲಕ ದೂರು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಮನೆ ನಿರ್ಮಿಸುವುದನ್ನು ನಿಲ್ಲಿಸಲು ಮೌಖಿಕ ಸೂಚನೆ ನೀಡಿದ್ದೇನೆ. ಈ ಬಡ ಕುಟುಂಬದ ಪರಿಸ್ಥಿತಿ ನನಗೂ ಅರ್ಥವಾಗಿದೆ. ಜಾಗದ ಬಗ್ಗೆ ,ಅವರಿಗೆ ತಿಳುವಳಿಕೆ ನೀಡಿದ್ದೇನೆ ಎಂದು ತಹಸೀಲ್ದಾರ್ ಅನಂತ ಶಂಕರ್‌ ತಿಳಿಸಿದ್ರು.

ನಮ್ಮದು ಪೂರ್ವಜರಿಂದಲೂ ಸ್ವಾಧೀನವಿದ್ದ ಜಾಗ ಇದಾಗಿದೆ. ನಮ್ಮ ಆರಾಧನ ದೈವಗಳ ಗುಡಿಗಳೂ ಇಲ್ಲಿವೆ. ಇರುವ ಮನೆಗೆ ಮನೆ ನಂಬರ್‌ ಇದ್ದು, ತೆರಿಗೆ ಪಾವತಿ ಮಾಡುತ್ತಿದ್ದೇನೆ. ಇತ್ತೀಚೆಗೆ 94 ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದರೂ ಕಂದಾಯ ಇಲಾಖೆ ತಿರಸ್ಕರಿಸಿದೆ. ಟರ್ಪಾಲು ಹೊದಿಕೆಯ ಗುಡಿಸಲು ಸೋರುತ್ತಿದೆ. ಪತ್ನಿ ಗರ್ಭಿಣಿಯಾಗಿದ್ದು, ಸೋರುವ ಮನೆಯಲ್ಲಿ ಆಕೆಯ ಆರೈಕೆ ಕಷ್ಟವಾಗಿದೆ. ಹೀಗಾಗಿ ಮನೆ ಬಿದ್ದ ಸಂದರ್ಭ ಕಂದಾಯ ಇಲಾಖೆ ನೀಡಿದ ಪರಿಹಾರ ಮೊತ್ತದಲ್ಲಿ ಮನೆ ನಿರ್ಮಿಸುತ್ತಿದ್ದೇವೆ ಎಂದು ಚಂದ್ರಶೇಖರ ಅಡ್ಕಾಡಿ ಹೇಳಿದ್ರು.

ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಕಟ್ಟಡ ನಿರ್ಮಾಣದಲ್ಲಿ ತೊಡಗಿದ ಕಾರ್ಮಿಕರ ಸಹಿತ ಕೆಲವರ ವಿರುದ್ಧ ತಹಸೀಲ್ದಾರ್‌ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಾತುಕತೆಯಲ್ಲಿ ಸಮಸ್ಯೆ ಬಗೆಹರಿದಿದೆ ಎಂದು ಹೇಳಲಾಗಿದೆ.

- Advertisement -
spot_img

Latest News

error: Content is protected !!