Monday, May 6, 2024
Homeಕರಾವಳಿಮಂಗಳೂರು: ಲೋನ್ ಆಪ್ ಮೂಲಕ ಸಾಲ ಪಡೆದ ಯುವತಿಗೆ ನಗ್ನ ಫೋಟೋ ವೈರಲ್ ಮಾಡುವ ಬೆದರಿಕೆ;...

ಮಂಗಳೂರು: ಲೋನ್ ಆಪ್ ಮೂಲಕ ಸಾಲ ಪಡೆದ ಯುವತಿಗೆ ನಗ್ನ ಫೋಟೋ ವೈರಲ್ ಮಾಡುವ ಬೆದರಿಕೆ; ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

spot_img
- Advertisement -
- Advertisement -

ಮಂಗಳೂರು: ಲೋನ್ ಆಪ್ ಮೂಲಕ ಸಾಲ ಪಡೆದ ಯುವತಿಗೆ ನಗ್ನ ಫೋಟೋ ವೈರಲ್ ಮಾಡುವ ಬೆದರಿಕೆ ಹಾಕಿದ ಹಿನ್ನೆಲೆ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರ ಯುವತಿ ಎ.15ರಂದು ಗೂಗಲ್‌ ಪ್ಲೇ ಸ್ಟೋರ್‌ನಿಂದ ಕ್ವಿಕ್‌ ಮನಿ ಎಂಬ ಲೋನ್‌ ಆಯಪ್‌ ಡೌನ್‌ಲೋಡ್‌ ಮಾಡಿದ್ದಳು.ಅದರಲ್ಲಿ 10,000 ರೂ. ಸಾಲಕ್ಕೆ ಅಪ್ಲೆ„ ಮಾಡಿದ್ದಳು. ಆಕೆಯ ಖಾತೆಗೆ ಕೂಡಲೇ 7,500 ರೂ. ಜಮೆ ಆಗಿತ್ತು. ಕೆಲವು ದಿನಗಳ ಬಳಿಕ ಅದನ್ನು ಮರುಪಾವತಿ ಮಾಡಿದ್ದಳು. ಆ ಬಳಿಕ ಹಲವು ವಾಟ್ಸಾಪ್ ಸಂಖ್ಯೆಗಳಿಂದ ಕರೆ ಮಾಡಿದ ಅಪರಿಚಿತರು ಕಡ್ಡಾಯವಾಗಿ ಪುನಃ ಸಾಲ ಪಡೆಯಬೇಕು ಎಂದು ಒತ್ತಾಯಿಸಿದರು.

ಆಕೆಯ ಖಾತೆಗೆ 14,000 ರೂ. ಜಮೆ ಮಾಡಿದರು. ಅದನ್ನು ಕೂಡ ಯುವತಿ ಮರುಪಾವತಿಸಿದ್ದಳು. ಆದರೂ ಆಕೆಗೆ ಕರೆ ಮಾಡಿದ ಅಪರಿಚಿತರು ಹೆಚ್ಚಿನ ಹಣ ಪಾವತಿಸುವಂತೆ ಒತ್ತಾಯಿಸಿದರು. ಆಕೆಯ ಖಾತೆಯಿಂದ 51,000 ರೂ.ಗಳನ್ನು ವರ್ಗಾಯಿಸಿಕೊಂಡರು. ಆ ಬಳಿಕವೂ ಹೆಚ್ಚಿನ ಹಣ ನೀಡುವಂತೆ ಒತ್ತಾಯಿಸಿದರು. ಒಂದು ವೇಳೆ ಹಣ ನೀಡದಿದ್ದರೆ ಆಕೆಯ ಫೋಟೋವನ್ನು ಹುಡುಗನೊಂದಿಗೆ ನಗ್ನವಾಗಿ ಇರುವಂತೆ ಎಡಿಟ್‌ ಮಾಡಿ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಕಳುಹಿಸಲಾಗುವುದು ಮತ್ತು ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

- Advertisement -
spot_img

Latest News

error: Content is protected !!