Sunday, May 19, 2024
Homeತಾಜಾ ಸುದ್ದಿಯೂಟ್ಯೂಬ್ ನೋಡಿ ಹೆರಿಗೆ ಮಾಡಿಸಿದ ಪತಿ ಮಹಾಶಯ; ತೀವ್ರ ರಕ್ತಸ್ರಾವವಾಗಿ ಮಹಿಳೆ ಸಾವು

ಯೂಟ್ಯೂಬ್ ನೋಡಿ ಹೆರಿಗೆ ಮಾಡಿಸಿದ ಪತಿ ಮಹಾಶಯ; ತೀವ್ರ ರಕ್ತಸ್ರಾವವಾಗಿ ಮಹಿಳೆ ಸಾವು

spot_img
- Advertisement -
- Advertisement -

ತಮಿಳುನಾಡು: ಪತಿ ಮಹಾಶಯನೊಬ್ಬ ಯೂಟ್ಯೂಬ್ ನೋಡಿ ಹೆರಿಗೆ ಮಾಡಿಸಿ ಪತ್ನಿಯ ಜೀವವನ್ನೇ ಬಲಿ ಪಡೆದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ.ಲೋಕನಾಯಕಿ ಮೃತ ದುರ್ದೈವಿ.

ಲೋಕನಾಯಕಿ  ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಮೊದಲೇ ಯುಟ್ಯೂಬ್‌ನಲ್ಲಿ ಮನೆಯಲ್ಲೇ ಹೇಗೆ ನಾರ್ಮಲ್‌ ಡೆಲಿವರಿ ಮಾಡಿಸಬೇಕು ಎಂದು ಕೆಲವು ವಿಡಿಯೋಗಳನ್ನು ನೋಡಿದ್ದ ಆಕೆಯ ಪತಿ ಮಾದೇಶ ಆಸ್ಪತ್ರೆಗೆ ಕರೆದೊಯ್ಯದೆ ಮನೆಯಲ್ಲಿ ತಾನೇ ಹೆರಿಗೆ ಮಾಡಲು ಯತ್ನಿಸಿದ್ದಾನೆ.ಮಗು ಸುರಕ್ಷಿತವಾಗಿ ಜನಿಸಿದರೂ ಹೊಕ್ಕುಳ ಬಳ್ಳಿ ಸರಿಯಾಗಿ ಕತ್ತರಿಸದ ಹಿನ್ನೆಲೆ ತೀವ್ರ ರಕ್ತಸ್ರಾವ ಉಂಟಾಗಿದೆ. ತಕ್ಷಣ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಆ ವೇಳೆಗಾಗಲೇ ಮಹಿಳೆ ಸಾವನ್ನಪ್ಪಿದ್ದಾಳೆ.

ಪತಿ ಪತ್ನಿ ಇಬ್ಬರೂ ಪದವಿಧರರಾದರೂ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಸಿದ್ಧರಿರಲಿಲ್ಲ ಎಂದು ಗ್ರಾಮದ ಆರೋಗ್ಯ ಸಿಬ್ಬಂದಿ ತಿಳಿಸಿದ್ದಾರೆ.ಈ ಬಗ್ಗೆ ಪತಿ ಮಾದೇಶ್‌ ವಿರುದ್ಧ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯೆ ರಾಧಿಕಾ ದೂರು ದಾಖಲಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಆರೋಪಿ ಪತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement -
spot_img

Latest News

error: Content is protected !!