Thursday, June 25, 2026
Homeಕರಾವಳಿಪುತ್ತೂರು ; ಬಿಜೆಪಿ ಮುಖಂಡನಿಂದ ದಂಪತಿಗೆ ಬೆದರಿಕೆ ಆರೋಪ

ಪುತ್ತೂರು ; ಬಿಜೆಪಿ ಮುಖಂಡನಿಂದ ದಂಪತಿಗೆ ಬೆದರಿಕೆ ಆರೋಪ

- Advertisement -
- Advertisement -

ಪುತ್ತೂರು ; ಬಿಜೆಪಿ ಮುಖಂಡ, ಹಿಂದೂ ಸಂಘಟನೆಯ ಮುರಳಿಕೃಷ್ಣ ಹಸಂತಡ್ಕ ದಂಪತಿಗೆ ತಲವಾರು ಹಿಡಿದು ಬೆದರಿಕೆಯೊಡ್ಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ತಾಲೂಕಿನ ಹರೀಶ್ ಅವರು ನೀಡಿದ ದೂರಿನಂತೆ, ಏಪ್ರಿಲ್ 16 ರಂದು ಮನೆಯಲ್ಲಿ ತನ್ನ ಪತ್ನಿಯೊಬ್ಬಳೇ ಇದ್ದ ಸಮಯದಲ್ಲಿ ಮನೆಗೆ ಬಂದಿದ್ದ ಹಸಂತಡ್ಕ, “ನಿನ್ನ ಗಂಡನಲ್ಲಿ ಸಾರಡ್ಕದ ಪೆಟ್ರೋಲ್ ಪಂಪ್ ಬಿಟ್ಟು ಕೊಡುವಂತೆ ಹೇಳು” ಎಂದು ಹರೀಶ್ ಪತ್ನಿ ಶ್ರೀದೇವಿ ಅವರಿಗೆ ಬೆದರಿಕೆಯೊಡ್ಡಿದ್ದಾಗಿ ಹೇಳಲಾಗಿದೆ. ಅಷ್ಟೇ ಅಲ್ಲದೇ, ಏಪ್ರಿಲ್ 19 ರಂದು ಮತ್ತೊಮ್ಮೆ ಹರೀಶ್ ಹಾಗೂ ಶ್ರೀದೇವಿ ದಂಪತಿಗೆ ತಲ್ವಾರ್ ಹಿಡಿದುಕೊಂಡು ಬಂದು ಬೆದರಿಕೆಯೊಡ್ಡಿದ್ದಾಗಿ ಆರೋಪಿಸಲಾಗಿದೆ. ಈ ಕುರಿತು ನ್ಯಾಯಾಲಯದ ಆದೇಶದಂತೆ ವಿಟ್ಲ ಠಾಣೆಯಲ್ಲಿ ಬಿಜೆಪಿ ಮುಖಂಡ ಮುರಳೀಕೃಷ್ಣ ಹಸಂತಡ್ಕ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

- Advertisement -

Latest News

error: Content is protected !!