Friday, June 5, 2026
Homeಕರಾವಳಿಉಡುಪಿಉಡುಪಿ: ಪೊಲೀಸರ ವಸತಿಗೃಹದಲ್ಲೇ ಕಳ್ಳತನ ಮಾಡಿದ ಖರ್ತನಾಕ್ ಕಳ್ಳರು

ಉಡುಪಿ: ಪೊಲೀಸರ ವಸತಿಗೃಹದಲ್ಲೇ ಕಳ್ಳತನ ಮಾಡಿದ ಖರ್ತನಾಕ್ ಕಳ್ಳರು

- Advertisement -
- Advertisement -

ಉಡುಪಿ: ಪೊಲೀಸರ ವಸತಿಗೃಹದಲ್ಲೇ ಖರ್ತನಾಕ್ ಕಳ್ಳರು ಕಳ್ಳತನ ಮಾಡಿದ ಘಟನೆ ಉಡುಪಿಯ ಮಿಷನ್ ಕಂಪೌಂಡ್ ಬಳಿಯ ಪೊಲೀಸ್ ಕ್ವಾರ್ಟರ್ಸ್‌ ನಲ್ಲಿ ನಡೆದಿದೆ. ಭಾನುವಾರ ಮೂರು ಗಂಟೆಯ ಸುಮಾರಿಗೆ ಪೊಲೀಸ್ ವಸತಿಗೃಹಕ್ಕೆ ಕಳ್ಳರು ನುಗ್ಗಿದ್ದಾರೆ.

ಡಿಎಆರ್ ಸಿಬ್ಬಂದಿ ರಾತ್ರಿ ಡ್ಯೂಟಿಗೆ ತೆರಳಿದ ವೇಳೆ  ಕಳ್ಳರು ಓರ್ವ ಸಿಬ್ಬಂದಿಯ ಮನೆಗೆ ನುಗ್ಗಿ ಬೆಳ್ಳಿ ಗೆಜ್ಜೆ , ಬೆಳ್ಳಿ ನಾಣ್ಯ ಕಳವು ಮಾಡಿದ್ದಾರೆ. ಮತ್ತೋರ್ವ ಸಿಬ್ಬಂದಿಯ ಮನೆಗೂ ನುಗ್ಗಿದ್ದ ಕಳ್ಳರು ಪೊಲೀಸ್ ಪದಕ ,ಯುನಿಫಾರ್ಮ್ ಕ್ಯಾಪ್ ನೋಡಿ ಎಸ್ಕೇಪ್ ಆದಿರುವ ಸಾಧ್ಯತೆಯಿದೆ ಎನ್ನಲಾಗಿದೆ.  ಪೋಲಿಸ್ ವಸತಿಗೃಹ ಎಂಬ ಮಾಹಿತಿ ಇಲ್ಲದೆ ಕಳ್ಳತನಕ್ಕೆ ಬಂದಿದ್ದರು ಎನ್ನಲಾಗುತ್ತಿದೆ.

ಹೊರ ರಾಜ್ಯದ ಕಳ್ಳರ ತಂಡದಿಂದ  ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಆಗಮಿಸಿ , ದಾಖಲೆಗಳ  ಸಂಗ್ರಹ ನಡೆಸಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!