Thursday, June 4, 2026
Homeಕರಾವಳಿಉಜಿರೆಯಲ್ಲಿ ಮನೆಗೆ ನುಗ್ಗಿ ಕಳ್ಳತನ, ಆರೋಪಿಯ ಬಂಧನ..!

ಉಜಿರೆಯಲ್ಲಿ ಮನೆಗೆ ನುಗ್ಗಿ ಕಳ್ಳತನ, ಆರೋಪಿಯ ಬಂಧನ..!

- Advertisement -
- Advertisement -

ಬೆಳ್ತಂಗಡಿ: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ದ್ವಿಚಕ್ರ ವಾಹನ ಮತ್ತು ಮನೆಗೆ ನುಗ್ಗಿ ಕಳವುಗೈಯಲಾಗಿತ್ತು ಈ ಘಟನೆ ಉಜಿರೆ ಗ್ರಾಮದ ಕಕ್ಕೆಜಾಲು ಎಂಬಲ್ಲಿ ನಡೆದಿತ್ತು. ಇದೀಗ ಕಳ್ಳನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಕುಟುಂಬವೊಂದು ಜ 22 ರಂದು ಕಾರ್ಯಕ್ರಮ ನಿಮಿತ್ತ ಮನೆಗೆ ಬೀಗ ಹಾಕಿ ಇತರ ಜಿಲ್ಲೆಗೆ ಹೋಗಿದ್ದವರು ಜ 23 ರಂದು ಮನೆಗೆ ಬಂದ್ದು ನೋಡಿದಾಗ ಮನೆಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಇಲ್ಲದನ್ನು ಗಮನಿಸಿ ಮನೆಯ ಒಳಗೆ ಬಂದ್ದು ನೋಡಿದಾಗ ಮನೆಯ ಹಂಚು ತೆಗೆದು ಕಳ್ಳರು ಮನೆಗೆ ನುಗ್ಗಿ 60 ಸಾವಿರ ನಗದು ಸೇರಿ ಮೊಬೈಲ್ ಚಿನ್ನಾಭರಣ ಹಾಗೂ ದ್ವಿಚಕ್ರ ಅಂದಾಜು 1,35, 000 ಮೌಲ್ಯದ ಸೊತ್ತುಗಳು ಕಳವುಗೈದಿರುವುದು ತಿಳಿದು ಬಂದಿದೆ.

ಬೆಳ್ತಂಗಡಿ ಠಾಣೆಗೆ ಈ ಬಗ್ಗೆ ಮನೆಯವರು ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂಡಾಜೆಯ ಇಂತಿಯಾಜ್ ಎಂಬ ಆರೋಪಿಯನ್ನು ಬಂಧಿಸಿ ಕಳವುಗೈದ ಒಟ್ಟು 78,000 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!