Tuesday, May 21, 2024
Homeಕರಾವಳಿಉಡುಪಿಮಣಿಪಾಲ: ಜಾಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವ್ಯಕ್ತಿಗೆ ವಂಚನೆ !

ಮಣಿಪಾಲ: ಜಾಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವ್ಯಕ್ತಿಗೆ ವಂಚನೆ !

spot_img
- Advertisement -
- Advertisement -

ಮಣಿಪಾಲ: ವ್ಯಕ್ತಿಯೊಬ್ಬರಿಗೆ ಜಾಗ ಕೊಡಿಸುವುದಾಗಿ ಹೇಳಿ ವಂಚಿಸಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ. ವಂಚನೆಗೆ ಒಳಗಾದ ಗೋಪಾಲ್ ಶೆಟ್ಟಿಗಾರ್ ( 72 ) ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು.

2018 ರ ನ .9 ರಂದು ಗೋಪಾಲ್ ಶೆಟ್ಟಿಗಾರ್ ಅವರಿಗೆ ಮಣಿಪಾಲದ ನವೀನ್ ಅಮೀನ್ ಹಾಗೂ ಮಂಚಿಕುಮೇರಿಯ ಟಿ .ಅನೀಶ್ ಕುಮಾರ್ ಎಂಬವರು ಹೆರ್ಗಾ ಗ್ರಾಮದ ಸರ್ವೆ ನಂಬ್ರ 189/12 ರಲ್ಲಿ ಪರಿವರ್ತಿತ 8 ಸೆಂಟ್ಸ್ ಆಸ್ತಿಯನ್ನು ಮಾರಾಟ ಮಾಡುವುದಾಗಿ 3,50,000 ರೂ . ಹಣಕ್ಕೆ ಕರಾರು ಮಾಡಿದ್ದರು.

ಇವರನ್ನು ನಂಬಿದ ದೂರುದಾರರು ಆರೋಪಿಗಳಿಗೆ 3,00,000 ರೂ . ಹಣವನ್ನು ನಗದಾಗಿ ಕೊಟ್ಟಿದ್ದರು. ಆದರೆ ಆರೋಪಿಗಳು ದೂರುದಾರರಿಗೆ ಯಾವುದೇ ದಾಖಲೆ ಪತ್ರಗಳನ್ನು ನೀಡದೇ ಮಾರಾಟ ಮಾಡುವ ಮೂಲ ದಾಖಲೆಗಳು ಕಳೆದು ಹೋಗಿದೆ ಎಂದು 2018 ರ ಮೇ 9 ರಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದರು.

ಅಲ್ಲದೆ ಸುಳ್ಳು ಪತ್ರಿಕಾ ಪ್ರಕಟಣೆ ನೀಡಿ ಅಫಿದಾವಿತ್‌ನಲ್ಲಿ ಸುಳ್ಳು ಮಾಹಿತಿ ದಾಖಲಿಸಿ ದೂರುದಾರರಿಗೆ ಜಾಗವನ್ನು ಕೂಡ ನೀಡದೇ , ಪಡೆದ ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -
spot_img

Latest News

error: Content is protected !!