Thursday, June 25, 2026
Homeಕರಾವಳಿಉಡುಪಿರಾಮ ಮಂದಿರ ವಿಚಾರ ಬಿಜೆಪಿಯವರು ಬಳಸಿಕೊಂಡರೆ ಯಾವುದೇ ತಪ್ಪಿಲ್ಲ..!; ಬಿಜೆಪಿ ಪಕ್ಷ ಕೆಲಸಮಾಡಿದೆ; ವಿಶ್ವಪ್ರಸನ್ನ ತೀರ್ಥ...

ರಾಮ ಮಂದಿರ ವಿಚಾರ ಬಿಜೆಪಿಯವರು ಬಳಸಿಕೊಂಡರೆ ಯಾವುದೇ ತಪ್ಪಿಲ್ಲ..!; ಬಿಜೆಪಿ ಪಕ್ಷ ಕೆಲಸಮಾಡಿದೆ; ವಿಶ್ವಪ್ರಸನ್ನ ತೀರ್ಥ ಶ್ರೀಪಾದ

- Advertisement -
- Advertisement -

ದಾವಣಗೆರೆ: ಬಿಜೆಪಿ ಪಕ್ಷ ರಾಮ ಮಂದಿರ ವಿಚಾರವನ್ನು ಬಳಸಿಕೊಂಡರೆ ಯಾವುದೇ ತಪ್ಪಿಲ್ಲ. ಬಿಜೆಪಿ ಪಕ್ಷದವರು ಕೆಲಸ ಮಾಡಿದ್ದಾರೆ. ಹಾಗಾಗಿ ಹೇಳಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಿಳಿಸಿದರು.

ಅವರು ಗುರುವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಿದಂತೆ ರಾಜ್ಯದಲ್ಲಿ ಹನುಮ ಅಭಿವೃದ್ಧಿಯಾಗಬೇಕು. ಪುಣ್ಯಕ್ಷೇತ್ರ ಅದಕ್ಕೊಂದು ಟ್ರಸ್ಟ್ ಮಾಡಬೇಕು,’ ಎಂದು ಒತ್ತಾಯಿಸಿದರು.

ಸರ್ಕಾರ ದೇವಸ್ಥಾನದ ಪ್ರಸಾದವನ್ನು ಪರೀಕ್ಷೆಗೆ ಒಳಪಡಿಸುವ ಅಗತ್ಯವಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಪ್ರಸಾದ ತಯಾರಿಸಲು ಮಾರ್ಗಸೂಚಿ  ಬಿಡುಗಡೆ ಮಾಡಬೇಕು ಎಂದರು.

- Advertisement -

Latest News

error: Content is protected !!