Thursday, June 4, 2026
Homeಕರಾವಳಿಉಡುಪಿಉಡುಪಿ: ಮಿಕ್ಸಿ ಸರಿಪಡಿಸುವ ವೇಳೆ ವಿದ್ಯುತ್ ಪ್ರವಹಿಸಿ ಶಾಲಾ ವಾಹನ ಚಾಲಕ ಸಾವು !

ಉಡುಪಿ: ಮಿಕ್ಸಿ ಸರಿಪಡಿಸುವ ವೇಳೆ ವಿದ್ಯುತ್ ಪ್ರವಹಿಸಿ ಶಾಲಾ ವಾಹನ ಚಾಲಕ ಸಾವು !

- Advertisement -
- Advertisement -

ಉಡುಪಿ : ಉಡುಪಿ ನಗರದ 76 ಬಡಗಬೆಟ್ಟುವಿನ ಒಳಕಾಡು ಎಂಬಲ್ಲಿ ಮಿಕ್ಸಿ ಸರಿಪಡಿಸುವ ವೇಳೆ ವಿದ್ಯುತ್ ಪ್ರವಹಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಬ್ರಹ್ಮಾವರ ವಿದ್ಯಾ ನಿಕೇತನ ಶಾಲೆಯ ವಾಹನ ಚಾಲಕ, ಒಳಕಾಡು ನಿವಾಸಿ ಚಂದ್ರಜೋಗಿ ( 45 ) ಮೃತಪಟ್ಟ ವ್ಯಕ್ತಿ. ಚಂದ್ರ ಜೋಗಿ ಊಟಕ್ಕೆ ಚಟ್ನಿ ತಯಾರಿಸಲು ಮಿಕ್ಸಿ ಆನ್ ಮಾಡುವ ವೇಳೆ ಮಿಕ್ಸಿಯ ವಿದ್ಯುತ್ ಪ್ರವಾಹ ತಂತಿಯಲ್ಲಿ ತೊಂದರೆ ಕಾಣಿಸಿಕೊಂಡಿದೆ. ಅವರು ಅದನ್ನು ಸರಿಪಡಿಸಲು ಹೋದಾಗ ಅವರಿಗೆ ವಿದ್ಯುತ್ ತಗುಲಿದೆ. ಇದರಿಂದ ಪ್ರಜ್ಞಾಹೀನ ಸ್ಥಿತಿ ತಲುಪಿದ ಅವರನ್ನು ಉಡುಪಿ ಆದರ್ಶ ಆಸ್ಪತ್ರೆಗೆ ಕರೆದೊಯ್ಯುಲಾಗಿತ್ತು.

ಅಲ್ಲಿ ಪರೀಕ್ಷಿಸಿದ ವೈದ್ಯರು ಚಂದ್ರಜೋಗಿ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಠಾಣೆ ಪ್ರಕರಣ ದಾಖಲಾಗಿದೆ .

- Advertisement -

Latest News

error: Content is protected !!