Wednesday, May 15, 2024
Homeಕರಾವಳಿಉಡುಪಿಉಡುಪಿ: 42ನೇ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ - 2021 "ಕಾಮರೂಪಿಗಳ್" ನಾಟಕ ಪ್ರಥಮ...

ಉಡುಪಿ: 42ನೇ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ – 2021 “ಕಾಮರೂಪಿಗಳ್” ನಾಟಕ ಪ್ರಥಮ ಪ್ರಶಸ್ತಿ !

spot_img
- Advertisement -
- Advertisement -

ಉಡುಪಿ: । ಡಾ। ಟಿ.ಎಂ.ಎ ಪೈ, ದಿ। ಎಸ್. ಎಲ್. ನಾರಾಯಣ ಭಟ್ ಮತ್ತು ದಿ। ಮಲ್ಪೆ ಮಧ್ವರಾಜ್ ಸ್ಮಾರಕ , ರಂಗಭೂಮಿ ಉಡುಪಿ ಆಯೋಜಿಸಿದ್ದ 42ನೆಯ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ – 2021ರ ನಾಟಕ ಸ್ಪರ್ಧೆಯ ಫಲಿತಾಂಶ ಇದೀಗ ಪ್ರಕಟವಾಗಿದೆ.

ಪ್ರಥಮ ಬಹುಮಾನವು “ಸಂಚಯ ಬೆಂಗಳೂರು ” ತಂಡದ “ಕಾಮರೂಪಿಗಳ್ ” ನಾಟಕಕ್ಕೆ ಲಭಿಸಿದೆ. ಈ ತಂಡವು ಪಿ.ವಿ.ಎಸ್. ಬೀಡೀಸ್ ಪ್ರಾಯೋಜಿತ ದಿ.ಪುತ್ತು ವೈಕುಂಠ ಶೇಟ್ ಸ್ಮಾರಕ ಪ್ರಥಮ ನಗದು ಬಹುಮಾನ ರೂ.35,000/- ಮತ್ತು ಸ್ಮರಣಿಕೆ ಮತ್ತು ಡಾ| ಟಿ.ಎಮ್.ಎ.ಪೈ ಸ್ಮಾರಕ ಪರ್ಯಾಯ ಫಲಕ ಹಾಗೂ ದಿ| ಎಸ್. ಎಲ್. ನಾರಾಯಣ ಭಟ್ ಸ್ಮಾರಕ ಸ್ಮರಣಿಕೆ ತನ್ನದಾಗಿಸಿಕೊಂಡಿದೆ.

ದ್ವಿತೀಯ ಬಹುಮಾನವಾದ ದಿ| ಮಲ್ಪೆ ಮಧ್ವರಾಜ್ ಸ್ಮಾರಕ ಪ್ರಮೋದ್ ಮಧ್ವರಾಜ್ ರವರ ಕೊಡುಗೆಯಾದ ರೂ.25,000/- ನಗದು ಬಹುಮಾನ ಮತ್ತು ಸ್ಮರಣಿಕೆ ಹಾಗೂ ಡಾ. ಆರ್.ಪಿ. ಕೊಪ್ಪೀಕರ್ ಸ್ಮಾರಕ ಪರ್ಯಾಯ ಫಲಕ ಮತ್ತು ಯು.ಪಿ. ಶೆಣೈ ಸ್ಮಾರಕ ಸ್ಮರಣಿಕೆ “ಸಮುದಾಯ ಧಾರಾವಾಡ (ರಿ.)” ತಂಡದ “ಬುದ್ಧ – ಪ್ರಬುದ್ಧ ” ನಾಟಕಕ್ಕೆ ಲಭಿಸಿದೆ.

ತೃತೀಯ ಬಹುಮಾನವನ್ನು “ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಮಂಗಳೂರು” ತಂಡದ “ದಾಟ್ಸ್ ಆಲ್ ಯುವರ್ ಆನರ್ ” ನಾಟಕವು ಪಡೆದು ಕೊಂಡಿದ್ದು, ದಿ| ಪಿ.ವಾಸುದೇವ ರಾವ್ ಅವರ ಸ್ಮರಣಾರ್ಥ ಶ್ರೀಮತಿ ಸೀತಾ ವಾಸುದೇವ ರಾವ್ ಅವರ ಕೊಡುಗೆಯಾದ ನಗದು ಬಹುಮಾನವಾದ ರೂ.15,000/- ಮತ್ತು ಸಖೂಬಾಯಿ ಶ್ರೀಧರ ನಾಯಕ್ ಕೊಕ್ಕರ್ಣೆ ಸ್ಮಾರಕ ಸ್ಮರಣಿಕೆಗೆ ಪಾತ್ರವಾಗಿದೆ.

- Advertisement -
spot_img

Latest News

error: Content is protected !!