- Advertisement -
- Advertisement -
ಕಾರ್ಕಳ; ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿಯ ಚಿನ್ನಾಭರಣ ಕದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಫೆಬ್ರವರಿ 23 ರಂದು ಕಾರ್ಕಳ ತಾಲೂಕಿನ ನಿಟ್ಟೆ ಗ್ರಮಾದ ಕೈಲಾಜೆ ಪಾದೆಮನೆ ರಾಘವೇಂದ್ರ ಭಟ್ ಅವರ ಮನೆಯಿಂದ ಹುಬ್ಬಳ್ಳಿ ನಿವಾಸಿ ಎಲ್ಲನಗೌಡ ಪಾಟೀಲ್ ಎಂಬಾತ ಐದೂವರೆ ಲಕ್ಷ ಬೆಲೆಬಾಳುವ ಚಿನ್ನದ ಆಭರಣಗಳು ಮತ್ತು ರೂ. 5500/- ನಗದನ್ನು ಕಳ್ಳತನ ಮಾಡಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು
ತನಿಖೆ ಕೈಗೊಂಡ ಕಾರ್ಕಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮತ್ತು ಸಿಬ್ಬಂದಿ ತಂಡವು ಆರೋಪಿತನಾದ ಹುಬ್ಬಳ್ಳಿ ಮಾರುತಿ ನಗರದ ಎಲ್ಲನಗೌಡ ಪಾಟೀಲ್ ಎಂಬಾತನನ್ನು ಬಂಧಿಸಿ ಕಳ್ಳತನ ಮಾಡಿದ್ದ 5.50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
- Advertisement -
