- Advertisement -
- Advertisement -
ಬಂಟ್ವಾಳ: ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದ ಮೂವರ ಮೇಲೆ ವ್ಯಕ್ತಿಗಳಿಗೆ ಹೆಜ್ಜೇನು ದಾಳಿ ಮಾಡಿ ಓರ್ವ ಗಂಭೀರವಾಗಿ ಗಾಯವಾಗಿ ಇನ್ನಿಬ್ಬರಿಗೆ ಅಲ್ಪಸ್ವಲ್ಪ ಗಾಯಗಳಾಗಿರುವ ಘಟನೆ ಇಂದು ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಕಲ್ಪನೆ ಎಂಬಲ್ಲಿ ನಡೆದಿದೆ.
ಕಲ್ಪನೆ ನಿವಾಸಿ ಪೂವಪ್ಪ ( 61) ಅವರಿಗೆ ಗಂಭೀರವಾಗಿ ಗಾಯವಾಗಿದ್ದು,ಅವರನ್ನು ಮಂಗಳೂರು ಎ.ಜೆ.ಆಸ್ಪತ್ರೆಗೆ ದಾಖಲಿಸಿದ್ದು,ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಉಳಿದಂತೆ ಮಹೇಶ್ ಮತ್ತು ಗೋಪಾಲ್ ಇಬ್ಬರು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಲ್ಪನೆಯಿಂದ ಬಿಸಿರೋಡು ಕಡೆಗೆ ಬರುವ ಹಿನ್ನೆಲೆಯಲ್ಲಿ ಮನೆಯಿಂದ ಕಲ್ಪನೆ ಬಸ್ ನಿಲ್ದಾಣಕ್ಕೆ ಬರುವ ಬರುವಾಗ ಏಕಾಏಕಿ ಹೆಜ್ಜೇನು ಮೂವರ ಮೇಲೆ ದಾಳಿ ಮಾಡಿದೆ. ಘಟನೆ ನಡೆದ ಕೂಡಲೇ ಕಲ್ಪನೆ ರಿಕ್ಷಾ ಚಾಲಕರು ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
- Advertisement -
