ಬೆಳ್ತಂಗಡಿ: ಸವಣಾಲು ಗ್ರಾಮದ ಗಡು ಹಾಕಿದ ಸ್ಥಳ ಮಂಜದಬೆಟ್ಟುವಿನಲ್ಲಿ ಪ್ರತೀ ವರ್ಷದಂತೆ ಮಾರ್ಚ್ 23 ಮತ್ತು 24 ರಂದು ನಡೆಯುವ ಇತಿಹಾಸ ಪ್ರಸಿದ್ಧ ಶ್ರೀ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ನೇಮೋತ್ಸವ ಹಾಗು ಅಮ್ಮನವರ ಜಾತ್ರೋತ್ಸವ ಈ ವರ್ಷವೂ ಪೂರ್ವ ಸಂಪ್ರದಾಯದಂತೆ ನಡೆಯಲಿದೆ .
ಆ ಪ್ರಯುಕ್ತ ಪಿಲಿಚಾಂಮುಂಡಿ ದೈವದ ಪರ್ವ ಸೇವೆ ,ಗೊನೆ ಮುಹೂರ್ತ, ಚಪ್ಪರ ಮುಹೂರ್ತ, ಕೋಳಿ ಗೂಟ ಮತ್ತು ಚೆಂಡು ಹಾಕುವ ಕಾರ್ಯಕ್ರಮ 21 ಮಾರ್ಚ್ ಮಂಗಳವಾರ ಮಂಜದಬೆಟ್ಟುವಿನಲ್ಲಿ ನಡೆಯಲಿದೆ .
ಇತ್ತೀಚಿಗೆ ಶ್ರೀ ಪಿಲಿಚಾಮುಂಡಿ ದೈವದ ಸಾನಿಧ್ಯದಲ್ಲಿ ನಡೆಸಿದ ತಾಂಬೂಲ ಪ್ರಶ್ನೆಯ ಸೂಚನೆಯಂತೆ ಗ್ರಾಮ ಸುಭಿಕ್ಷೆ ಮತ್ತು ಏಕತೆಗಾಗಿ ಪಂಚಗವ್ಯ ಶುದ್ದಿ , ಮಹಾಗಣಪತಿ ಹವನ,ಮೃತ್ಯುಂಜಯ ಹವನ ಹಾಗು ಅನ್ಯೋನ್ಯ ಐಕ್ಯಮತ್ಯ ಭಾಗ್ಯ- ಐಕ್ಯಮತ್ಯ ಸೂಕ್ತ ಪಾರಾಯಣ ಹಾಗು ಹವನ 20 ಮಾರ್ಚ್ ಸೋಮವಾರ ನಡೆಯಲಿರುವುದು.
ಈ ಎಲ್ಲಾ ಕಾರ್ಯಕ್ರಮದಲ್ಲಿ ಊರ ಹಾಗೂ ಪರವೂರ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ .