Saturday, May 18, 2024
Homeಅಪರಾಧಬೆಂಗಳೂರು: ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಕಳ್ಳತನಕ್ಕಿಳಿದ ಆರೋಪಿಗಳು; ಬೀಗ ಹಾಕಿದ ಮನೆಗಳೇ ಇವರ ಟಾರ್ಗೆಟ್

ಬೆಂಗಳೂರು: ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಕಳ್ಳತನಕ್ಕಿಳಿದ ಆರೋಪಿಗಳು; ಬೀಗ ಹಾಕಿದ ಮನೆಗಳೇ ಇವರ ಟಾರ್ಗೆಟ್

spot_img
- Advertisement -
- Advertisement -

ಬೆಂಗಳೂರು: ಜೈಲಿನಿಂದ ಬಿಡುಗಡೆಯಾದ ಬಳಿಕವೇ ಕಳ್ಳತನಕ್ಕಿಳಿದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕರಾಟೆ ಸೀನ, ಕೊಕ್ಕರೆ ಸತೀಶ್ ಹಾಗೂ ತೇಜಸ್ ಬಂಧಿತ ಆರೋಪಿಗಳಾಗಿದ್ದು, ಪರಪ್ಪನ ಅಗ್ರಹಾರ ಜೈಲ್ಲಿನಲ್ಲಿ ಸ್ನೇಹಿತರಾಗಿದ್ದ ಖದೀಮರು, ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಮತ್ತೆ ಮನೆಗಳ್ಳತನಕ್ಕಿಳಿದಿದ್ದರು.
ಹಗಲಿನ ವೇಳೆ ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಿದ್ದರು.

ರಾತ್ರಿ ಆ ಮನೆಗಳ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದರು. ಕಳ್ಳತನ ಮಾಡಿದ ನಂತರ ಪ್ರತಿ ಬಾರಿ ದೇವಸ್ಥಾನಕ್ಕೆ ತೆರಳಿ ಸ್ವಲ್ಪ ಹಣವನ್ನು ದೇವರಿಗೆ ಕಾಣಿಕೆ ಹಾಕುತ್ತಿದ್ದರು. ದೇವರ ದರ್ಶನದ ಬಳಿಕ ಪಾಂಡಿಚೆರಿಗೆ ಎಂಜಾಯ್ ಮಾಡಲು ಹೋಗುತ್ತಿದ್ದರು.


 ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 55 ಲಕ್ಷ ಮೌಲ್ಯದ 1.12 ಕೆಜಿ ತೂಕದ ಚಿನ್ನಾಭರಣ,1.96 ಕೆಜಿ ತೂಕದ ಬೆಳ್ಳಿ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಿದಾಗ ಒಟ್ಟು 14 ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಸಂಬಂಧ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!