Sunday, June 7, 2026
Homeಕರಾವಳಿಉಡುಪಿಉಡುಪಿ: ಲೋಕೋಪಯೋಗಿ ಕ್ವಾಟ್ರಸ್ ನಲ್ಲಿ‌ ಕಳ್ಳರ ಕೈಚಳಕ: ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳ ಕಳ್ಳತನ

ಉಡುಪಿ: ಲೋಕೋಪಯೋಗಿ ಕ್ವಾಟ್ರಸ್ ನಲ್ಲಿ‌ ಕಳ್ಳರ ಕೈಚಳಕ: ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳ ಕಳ್ಳತನ

- Advertisement -
- Advertisement -

ಉಡುಪಿ: ಲೋಕೋಪಯೋಗಿ ಕ್ವಾಟ್ರಸ್ ನಲ್ಲಿ‌ ಕಳ್ಳರು ಕೈಚಳಕ ತೋರಿಸಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.

ಜುಲೈ 19ರಂದು ರಾತ್ರಿ ಉಡುಪಿ ಮಿಷನ್ ಕಂಪೌಂಡ್ ಜಂಕ್ಷನ್ ನಲ್ಲಿ‌ರುವ ಲೋಕೋಪಯೋಗಿ ಕ್ವಾಟ್ರಸನಲ್ಲಿರುವ ಮನೆಗೆ ನುಗ್ಗಿದ ಕಳ್ಳರು ಮನೆಯನ್ನೆಲ್ಲಾ ಜಾಲಾಡಿ ಚಿನ್ನ, ಬೆಳ್ಳಿ, ನಗದು ಹೀಗೆ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳವುಗೈದು ಪರಾರಿಯಾಗಿದೆ. ಸಿಸಿಟಿವಿಯಲ್ಲಿ ‌ಕಳ್ಳರ ಚಹರೆ ಸಹಿತ ಕೃತ್ಯ ಬಯಲಾಗಿದೆ. ಪೊಲೀಸ್ ಜಾಕೆಟ್ ‌ನಲ್ಲಿ ಬಂದ‌ ಮೂವರು ಕಳ್ಳರ ಗ್ಯಾಂಗ್ ಈ ಕೃತ್ಯ ನಡೆಸಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಉಡುಪಿ ನಗರ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇದೇ ಕ್ವಾಟರ್ಸ್ ನಲ್ಲಿರುವ  ಆರು ಮನೆಗಳಿಗೆ ಕಳೆದ ವರ್ಷದ ಸೆ.29ರಂದು ಕಳ್ಳರು ನುಗ್ಗಿ ಲಕ್ಷಾಂತರ ರೂ. ವೌಲ್ಯದ ನಗ-ನಗದು ಕಳವು ಮಾಡಿ ಪರಾರಿಯಾಗಿದ್ದರು. ಉಡುಪಿ ನಗರ ಠಾಣೆಯಿಂದ ಅನತಿ ದೂರದಲ್ಲಿರುವ ಈ ವಸತಿ ಸಮುಚ್ಚಯದಲ್ಲಿ ಒಂಭತ್ತು ತಿಂಗಳ ಅಂತರದಲ್ಲಿ ಇದೀಗ ಮತ್ತೆ ಕಳ್ಳತನ ಆಗಿದೆ. ಈ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈವರೆಗೆ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ. ಈ ಮಧ್ಯೆ ಮತ್ತೆ ಕಳ್ಳತನ ನಡೆದಿರುವುದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ.

- Advertisement -

Latest News

error: Content is protected !!