Friday, June 5, 2026
Homeಕರಾವಳಿಮಂಗಳೂರಿನ ಮುಲ್ಕಿಯಲ್ಲಿ ಅಂಗಡಿಗಳಲ್ಲಿ ಕಳ್ಳತನಕ್ಕೆ ಯತ್ನ

ಮಂಗಳೂರಿನ ಮುಲ್ಕಿಯಲ್ಲಿ ಅಂಗಡಿಗಳಲ್ಲಿ ಕಳ್ಳತನಕ್ಕೆ ಯತ್ನ

- Advertisement -
- Advertisement -

ಮಂಗಳೂರು ; ಇಲ್ಲಿನ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ನಾಡು  ಮೊಬೈಲ್ ಅಂಗಡಿ ಹಾಗೂ ಸಮೀಪದ ಗೂಡಂಗಡಿಯಲ್ಲಿ ಕಳವಿಗೆ ವಿಫಲ ಯತ್ನ ನಡೆದಿದೆ

ಇಂದು ಮುಂಜಾನೆ 3:00 ಗಂಟೆ ಸುಮಾರಿಗೆ ಕಾರ್ನಾಡು ಖಾನ್ ಕಾಂಪ್ಲೆಕ್ಸ್ ನಲ್ಲಿರುವ ಇಮ್ರಾನ್ ಮಾಲೀಕತ್ವದ ಮೊಬಿಕಾಮ್ ಮೊಬೈಲ್ ಅಂಗಡಿಯ ಎದುರು ಭಾಗದ ಶೆಟರಿನ ಬೀಗವನ್ನು ಭಾರವಾದ ಸಾಧನದಿಂದ ಮುರಿದು  ಕಳ್ಳತನ ನಡೆಸಲು ವಿಫಲ ಯತ್ನ ನಡೆಸಿದ್ದಾರೆ. ಬಳಿಕ ಅಲ್ಲೇ ಇದ್ದ ಸುಧಾಕರ್ ಪೂಜಾರಿ ಎಂಬವರ ಗೂಡಂಗಡಿಯ ಬೀಗ ಮುರಿಯಲು ಯತ್ನಿಸಿದ್ದಾನೆ. ಆದರೆ ಸಾಧ್ಯವಾಗಿಲ್ಲ. ಕಳ್ಳನು ಅಂಗಡಿಯ ಎದುರು ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

- Advertisement -

Latest News

error: Content is protected !!