Saturday, July 25, 2026
Homeಅಪರಾಧಬಂಟ್ವಾಳದ ಮೊಡಂಕಾಪು ದೇವಸ್ಥಾನದಲ್ಲಿ ಕಳವು; ಲಕ್ಷಾಂತರ ಮೌಲ್ಯದ ಪೂಜಾ ಸಾಮಗ್ರಿಗಳು ಕಳ್ಳರ ಪಾಲು..!!

ಬಂಟ್ವಾಳದ ಮೊಡಂಕಾಪು ದೇವಸ್ಥಾನದಲ್ಲಿ ಕಳವು; ಲಕ್ಷಾಂತರ ಮೌಲ್ಯದ ಪೂಜಾ ಸಾಮಗ್ರಿಗಳು ಕಳ್ಳರ ಪಾಲು..!!

- Advertisement -
- Advertisement -

ಬಂಟ್ವಾಳ: ತಾಲೂಕಿನ ಮೊಡಂಕಾಪುವಿನಲ್ಲಿರುವ ಶ್ರೀ ಆದಿಶಕ್ತಿ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನದ ಮುಂಭಾಗದ ಬಾಗಿಲಿನ ಬೀಗ ಮುರಿದು, ಪುರಾತನ ಕಾಲದ ದೇವರ ಪೂಜಾ ಸಾಮಗ್ರಿಗಳನ್ನು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ದೇವಸ್ಥಾನಕ್ಕೆ ಅಕ್ರಮವಾಗಿ ಪ್ರವೇಶಿಸಿದ ಕಳ್ಳರು ಬೆಳ್ಳಿಯ ಸಾಮಗ್ರಿಗಳು, 1 ಕೊಪ್ಪರಿಗೆ, 10 ದೀಪಗಳು, 10 ಹಿತ್ತಾಳೆಯ ಗಿಂಡಿ, 5 ಹಿತ್ತಾಳೆಯ ಹರಿವಾಣ, ತಾಮ್ರದ ಪಾತ್ರೆ, 2 ತಾಮ್ರದ ಕೊಡಪಾನ, 1 ತಾಮ್ರದ ಅಡ್ಯರ ಹಾಗೂ ಕೆಲವು ಸ್ಟೀಲ್ ಸಾಮಗ್ರಿಗಳು ಸೇರಿದಂತೆ ಒಟ್ಟು ₹1,57,000 ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ.
ಮೂವರು ಕಳ್ಳರು ಗೋಣಿ ಚೀಲದಲ್ಲಿ ವಸ್ತುಗಳನ್ನು ತುಂಬಿಕೊಂಡು ಸಾಗಿಸುತ್ತಿರುವ ದೃಶ್ಯಗಳು ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಈ ಕುರಿತು ಸುನಿಲ್ ಕುಮಾರ್ ಕೆ.ಎನ್. ಎಂಬುವವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!