Thursday, June 4, 2026
Homeತಾಜಾ ಸುದ್ದಿಹಿರಿಯ ನಟಿ ವಿನಯಪ್ರಸಾದ್ ಮನೆಯಲ್ಲಿ ಕಳ್ಳತನ

ಹಿರಿಯ ನಟಿ ವಿನಯಪ್ರಸಾದ್ ಮನೆಯಲ್ಲಿ ಕಳ್ಳತನ

- Advertisement -
- Advertisement -

ಬೆಂಗಳೂರು: ಹಿರಿಯ ನಟಿ ವಿನಯಪ್ರಸಾದ್‌ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ.  ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು  ಮನೆಯಲ್ಲಿದ್ದ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನ ದೋಚಿಕೊಂಡು ಹೋಗಿದ್ದಾರೆ.

ದೀಪಾವಳಿ ಹಬ್ಬಕ್ಕೆ ಕುಟುಂಬ ಸಮೇತರಾಗಿ ವಿನಯ ಪ್ರಸಾದ್ ಅವರು, ತಮ್ಮ ಹುಟ್ಟೂರು ಉಡುಪಿಗೆ ಹೋಗಿದ್ದರು. ಊರಿಗೆ ಹೋಗಿರುವುದನ್ನು ಗಮನಿಸಿದ ಕಳ್ಳರು ದೀಪಾವಳಿ ಹಬ್ಬದ ದಿನ ಮನೆ ಬೀಗ ಮುರಿದು ಕಳ್ಳತನ ಮಾಡಿದ್ದಾರೆ.

ವಿನಯ ಪ್ರಸಾದ್ ಕುಟುಂಬ ಹಬ್ಬ ಮುಗಿಸಿ ನಂದಿನಿ ಲೇಔಟ್‍ನಲ್ಲಿರುವ ತಮ್ಮ ಮನೆಗೆ ಬಂದಾಗ ಕಳ್ಳತನ ಆಗಿರೋದು ಗೊತ್ತಾಗಿದೆ. ಕಳ್ಳತನ ಸಂಬಂಧ  ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ‌. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!