- Advertisement -
![]()
- Advertisement -
ವಿಟ್ಲ : ಅಂಗಡಿ ಮಾಲೀಕರೊಬ್ಬರ ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ, ವಿಟ್ಲದ ಕಸಬ ಗ್ರಾಮದ ರಂಗರಮಜಲು ನಿವಾಸಿ ಮನು ಅಲಿಯಾಸ್ ಮನೋಹರ ಬಂಧಿತ ಆರೋಪಿ .
ಜ. 20 ರಿಂದ ಮಾ. 20 ರವರೆಗೆ ಎರಡು ತಿಂಗಳ ಕಾಲ ವಿಟ್ಲ ಕಸಬ ಗ್ರಾಮದ ರಂಗರಮಜಲು ಮುರಳೀಧರ ಎಂಬವರ ಮನೆಯಲ್ಲಿ ಯಾರೂ ಇರಲಿಲ್ಲ. ಈ ಸಂದರ್ಭವನ್ನು ಬಳಸಿಕೊಂಡ ಆರೋಪಿ ಒಟ್ಟು 3,20,000 ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ.ಈ ಕುರಿತು ಮುರಳೀಧರ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಅದರಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
- Advertisement -


