Sunday, June 7, 2026
Homeಕರಾವಳಿಬಂಟ್ವಾಳ: ಯುವಕನಿಗೆ ಆತನ ಸ್ನೇಹಿತನಿಂದಲೇ ಚೂರಿ ಇರಿತ

ಬಂಟ್ವಾಳ: ಯುವಕನಿಗೆ ಆತನ ಸ್ನೇಹಿತನಿಂದಲೇ ಚೂರಿ ಇರಿತ

- Advertisement -
- Advertisement -

ಬಂಟ್ವಾಳ: ಯುವಕನಿಗೆ ಆತನ ಸ್ನೇಹಿತನೇ ಚೂರಿ ಇರಿದು ಪರಾರಿಯಾದ ಘಟನೆ  ಇಂದು ಮಧ್ಯಾಹ್ನ ಪಾಣೆಮಂಗಳೂರು ಎಂಬಲ್ಲಿ ನಡೆದಿದೆ.ಪಾಣೆಮಂಗಳೂರು ನೆಹರು ನಗರ ನಿವಾಸಿ ಸುಲೈಮಾನ್ ಎಂಬ ಯುವಕನಿಗೆ ಆತನ ಸ್ನೇಹಿತ ನಿಸಾರ್ ಚೂರಿ ಇರಿದು ಪರಾರಿಯಾಗಿದ್ದಾನೆ.ನಿಸಾರ್ ಕೂಡ ನೆಹರು ನಗರ ನಿವಾಸಿಯಾಗಿದ್ದು, ಇಬ್ಬರು ಗಾಂಜ ವ್ಯಸನಿಗಳಾಗಿದ್ದರು ಎನ್ನಲಾಗಿದೆ.

ಮಧ್ಯಾಹ್ನ ಸುಮಾರು 1.30 ಗಂಟೆ ವೇಳೆ ಇವರಿಬ್ಬರು ನೆಹರು ನಗರದ ಬಳಿ ಬಂದಿದ್ದು, ಕ್ಷುಲ್ಲಕ ಕಾರಣಕ್ಕಾಗಿ ಮಾತಿಗೆ ಮಾತು ಬೆಳೆದು ನಿಸಾರ್ ಸುಲೈಮಾನ್ ಗೆ ಚೂರಿಯಿಂದ ಹೊಟ್ಟೆಯ ಭಾಗಕ್ಕೆ ತಿವಿದಿದ್ದಾನೆ ಎನ್ನಲಾಗಿದೆ.ಗಾಯಗೊಂಡ ಸುಲೈಮಾನ್ ನನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ಭೇಟಿ ನೀಡಿದ್ದಾರೆ.

ಆರೋಪಿ ನಿಸಾರ್ ನನ್ನು ಬಂಧಿಸಲು ಪೋಲೀಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!