Monday, June 29, 2026
Homeತಾಜಾ ಸುದ್ದಿಬ್ರೈನ್ ಡೆಡ್ ಆಗಿದ್ದ ಅಭಿಮಾನಿಯ ಕೊನೆಯ ಆಸೆ ನೆರವೇರಿಸಿದ ನಟ ಧ್ರುವ ಸರ್ಜಾ

ಬ್ರೈನ್ ಡೆಡ್ ಆಗಿದ್ದ ಅಭಿಮಾನಿಯ ಕೊನೆಯ ಆಸೆ ನೆರವೇರಿಸಿದ ನಟ ಧ್ರುವ ಸರ್ಜಾ

- Advertisement -
- Advertisement -

ಬೆಂಗಳೂರು : ಬ್ರೈನ್ ಡೆಡ್ ಆಗಿದ್ದ ತನ್ನ ಅಭಿಮಾನಿ ಯುವಕನೊಬ್ಬನ ಕೊನೆ ಆಸೆಯನ್ನು ಈಡೇರಿಸಿದ್ದಾರೆ ನಟ ಧ್ರುವ ಸರ್ಜಾ. ಧ್ರುವ ಸರ್ಜಾ ಅಭಿಮಾನಿ, ಅಪಘಾತದಲ್ಲಿ ಗಾಯಗೊಂಡ ಯುವಕನೊಬ್ಬ ಧ್ರುವ ಸರ್ಜಾ ನೋಡಲು ಆಸೆ ಪಟ್ಟಿದ್ದಾನೆಂಬ ಸುದ್ದಿ ತಿಳಿದು ಓಡೋಡಿ ಬಂದು ಮಾನವೀಯತೆ ಮೆರೆದಿದ್ದಾರೆ.

ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ಪೃಥ್ವಿರಾಜ್‌ ಬ್ರೈನ್‌ ಡೆಡ್‌ ಆಗಿದ್ದು, ಬೆಂಗಳೂರಿನ ಎಂ.ಎಸ್. ರಾಮಯ್ಯ ಮೇಮೊರಿಯಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ, ಪೋಷಕರು ಅಂಗಾಂಗ ದಾನ ಮಾಡಲು ಪೋಷಕರು ನಿರ್ಧರಿಸಿದ್ದಾರೆ. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಭಿಮಾನಿಯ ಆಸೆಯಂತೆ ಆಸ್ಪತ್ರೆಗೆ ಬಂದ ಧುವ ಸರ್ಜಾ ಭೇಟಿ ನೀಡಿ ಅಭಿಮಾನಿಯನ್ನು ನೋಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇದೇ ವೇಳೆ ಮಾತನಾಡಿದ ಧ್ರುವ ಸರ್ಜಾ ದಯವಿಟ್ಟು ಹೆಲ್ನೆಟ್ ಧರಿಸಿ. ನನ್ನ ಅಜ್ಜಿನ ಆಸ್ಪತ್ರೆಯಲ್ಲಿ ನೋಡಿದ ಮೇಲೆ ಇನ್ಮುಂದೆ ಆಸ್ಪತ್ರೆಗೆ ಹೋಗೋದು ಬೇಡ ಅಂದೊಕೊಂಡಿದ್ದೆ. ಆದರೆ, ಈಗ ಬಂದೆ’ ಎಂದಿದ್ದಾರೆ ಯುವಕನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

- Advertisement -

Latest News

error: Content is protected !!