Wednesday, June 26, 2024
Homeಕರಾವಳಿಉಡುಪಿಕರ್ಕಶ ಹಾರ್ನ್ ತೆರವುಗೊಳಿಸಲು ಮುಗಿದ ಗಡುವು; ಸಿಟಿ ಬಸ್ಸುಗಳ ಕರ್ಕಶ ಹಾರ್ನ್ ತೆರವುಗೊಳಿಸಿದ ಟ್ರಾಫಿಕ್ ಪೊಲೀಸರು

ಕರ್ಕಶ ಹಾರ್ನ್ ತೆರವುಗೊಳಿಸಲು ಮುಗಿದ ಗಡುವು; ಸಿಟಿ ಬಸ್ಸುಗಳ ಕರ್ಕಶ ಹಾರ್ನ್ ತೆರವುಗೊಳಿಸಿದ ಟ್ರಾಫಿಕ್ ಪೊಲೀಸರು

spot_img
- Advertisement -
- Advertisement -

ಉಡುಪಿ: ಜೂ.3ರಂದು ಸಂಚಾರ ಪೊಲೀಸರು ನೀಡಿರುವ ಗಡುವು ಮುಗಿದ ಹಿನ್ನೆಲೆಯಲ್ಲಿ ಇಂದು ಕಾರ್ಯಾಚರಣೆ ನಡೆಸಿ ಉಡುಪಿ ಸಿಟಿ ಬಸ್ ಗಳ ಕರ್ಕಶ ಹಾರ್ನ್ ಗಳನ್ನು ತೆರವುಗೊಳಿಸಿ ದಂಡ ವಿಧಿಸಲಾಯಿತು.

ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಜೂ.3ರಂದು ನಡೆದ ಉಡುಪಿ ಸಿಟಿ ಬಸ್ ಮಾಲಕರು ಮತ್ತು ಸರ್ವಿಸ್ ಬಸ್ ಮಾಲಕರ ಸಭೆಯಲ್ಲಿ ಉಡುಪಿಯ ಸಿಟಿ ಹಾಗೂ ಸರ್ವಿಸ್ ಬಸ್ ಗಳಲ್ಲಿ ಅಳವಡಿಸಲಾದ ಕರ್ಕಶ ಹಾರ್ನ್ ಗಳನ್ನು ಜೂ.15ರೊಳಗೆ ಕಡ್ಡಾಯವಾಗಿ ತೆರವುಗೊಳಿಸುವಂತೆ ಸೂಚನೆ ನೀಡಲಾಯಿತು.

ಅದರಂತೆ ಗಡುವು ಮುಗಿದ ಹಿನ್ನೆಲೆಯಲ್ಲಿ ಉಡುಪಿ ಸಂಚಾರ ಪೊಲೀಸ್ ಠಾಣೆಯ ಎಸ್ಸೈ ಸುದರ್ಶನ್ ದೊಡ್ಡಮನಿ ನೇತೃತ್ವದಲ್ಲಿ ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು ಏಳು ಬಸ್ ಗಳಲ್ಲಿದ್ದ ಕರ್ಕಶ ಹಾರ್ನ್ ಗಳನ್ನು ತೆರವುಗೊಳಿಸಲಾಯಿತು. ಬಸ್ ಗಳ ವಿರುದ್ಧ ತಲಾ 500ರೂ.ನಂತೆ ಒಟ್ಟು 3500 ರೂ. ದಂಡ ವಿಧಿಸಲಾಯಿತು. ಎರಡನೇ ಬಾರಿಗೆ 1000ರೂ. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ.

ಈಗಾಗಲೇ ಗಡುವು ನೀಡಿರುವ ಹಿನ್ನೆಲೆಯಲ್ಲಿ ಬಹುತೇಕ ಸಿಟಿ ಬಸ್ ಗಳು ಕರ್ಕಶ ಹಾರ್ನ್ ಗಳನ್ನು ತೆರವುಗೊಳಿಸಿದೆ. ಆದುದರಿಂದ ಈ ಕಾರ್ಯಾಚರಣೆ  ಮತ್ತೆ ಮುಂದುವರೆಯಲಿದೆ. ಮುಂದೆ ಸರ್ವಿಸ್ ಬಸ್ ಗಳ ವಿರುದ್ಧವೂ ಕಾರ್ಯಚರಣೆ ನಡೆಸಲಾಗುವುದು ಎಂದು ಎಸ್ಸೈ ಸುದರ್ಶನ್ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!