Monday, June 8, 2026
Homeತಾಜಾ ಸುದ್ದಿಮುಲ್ಕಿ: ಸರಣಿ ಅಪಘಾತ: ಕಾರಿನಲ್ಲಿದ್ದ ಮೂವರು ಹಾಗೂ ಬೈಕ್‌ ಸವಾರ ಪವಾಡ ಸದೃಶ ಪಾರು

ಮುಲ್ಕಿ: ಸರಣಿ ಅಪಘಾತ: ಕಾರಿನಲ್ಲಿದ್ದ ಮೂವರು ಹಾಗೂ ಬೈಕ್‌ ಸವಾರ ಪವಾಡ ಸದೃಶ ಪಾರು

- Advertisement -
- Advertisement -

ಮುಲ್ಕಿ: ಸರಣಿ ಅಪಘಾತ ಸಂಭವಿಸಿ ಅಪಘಾತಕ್ಕೀಡಾದವರು ಪವಾಡ ಸದೃಶ ಪ್ರಾಣಾಪಾಯದಿಂದ ಪಾರಾದ ಘಟನೆ ರಾ.ಹೆ. 66 ರ ಕಾರ್ನಾಡ್ ಬೈಪಾಸ್ ಬಳಿ ನಡೆದಿದೆ.

ಕುಂದಾಪುರದಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಕಾರಿನ ಎದುರು ಸಂಚರಿಸುತ್ತಿದ್ದ ಲಾರಿ ಏಕಾಏಕಿ ಬಲಕ್ಕೆ ತಿರುಗಿದೆ. ತಕ್ಷಣ ಅಪಘಾತ ತಪ್ಪಿಸಲು ತಕ್ಷಣ ಕಾರಿನ ಚಾಲಕ ಯತ್ನಿಸುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಕಾರಿನ ಟಯರ್ ಸ್ಪೋಟಗೊಂಡಿದೆ.  ಕಾರು ತೀರಾ ಎಡಬದಿ ಹೆದ್ದಾರಿಗೆ ಚಲಿಸಿದ್ದು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬುಲೆಟ್ ಗೆ ಡಿಕ್ಕಿ ಹೊಡೆದಿದೆ.  ಘಟನೆಯಲ್ಲಿ ಕಾರಿಗೆ ಹಾನಿಯಾಗಿದ್ದು ಕಾರಿನಲ್ಲಿದ್ದ ಚಾಲಕ ಸಹಿತ ಮೂವರು ಹಾಗೂ ಬುಲೆಟ್ ಸವಾರ ಪವಾಡ ಸದೃಶ ಪಾರಾಗಿದ್ದಾರೆ. ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

- Advertisement -

Latest News

error: Content is protected !!