Saturday, June 6, 2026
Homeಕರಾವಳಿಉಡುಪಿತುಳುನಾಡಿನ ದೈವದ ಪವಾಡ: ಕದ್ದ ಚಿನ್ನಾಭರಣವನ್ನು ತೆಗೆದುಕೊಂಡು ಹೋಗಲಾಗದೆ ವಾಪಸು ಇಟ್ಟ ಖದೀಮರು !

ತುಳುನಾಡಿನ ದೈವದ ಪವಾಡ: ಕದ್ದ ಚಿನ್ನಾಭರಣವನ್ನು ತೆಗೆದುಕೊಂಡು ಹೋಗಲಾಗದೆ ವಾಪಸು ಇಟ್ಟ ಖದೀಮರು !

- Advertisement -
- Advertisement -

ಉಡುಪಿ : ತುಳುನಾಡಿನಲ್ಲಿ ದೈವದ ಪವಾಡ ಸಾಕಷ್ಟು ಆಗಿವೆ. ಏನೇ ದುಃಖ, ಖುಷಿ, ವಸ್ತು ಕಳೆದುಕೊಂಡರು ದೈವದ ಬಳಿ ಮೊರೆ ಹೋಗುತ್ತಾರೆ. ಕರಾವಳಿ ಭಾಗದಲ್ಲಿ ದೈವದ ಪವಾಡಗಳು ಸಾಕಷ್ಟು ನಡೆದಿವೆ.

ಇಲ್ಲಿನ ದೊಡ್ಡಣಗುಡ್ಡೆ ಗುಂಡಿಬೈಲು ಪಂಚ ಧೂಮಾವತಿ ದೈವಸ್ಥಾನದ ಪಕ್ಕದಲ್ಲಿ ಕಳ್ಳತನ ನಡೆದಿತ್ತು. ದೈವಸ್ತಾನದ ಹಿಂಬದಿ ಇರುವ ಬಾಬುರಾವ್ ಆಚಾರ್ಯರವರ ಮನೆಯ ಚಿನ್ನಾಭರಣ ಕಳವಾಗಿತ್ತು, ಆಗ ಪಂಚ ಧೂಮಾವತಿ ದೈವದ ಮೊರೆ ಹೋಗಿದ್ದರು.

ಈ ಘಟನೆ ನಡೆದ ಕೇವಲ ಎರಡು ದಿನದಲ್ಲಿ ಕಳ್ಳರು ಸಿಕ್ಕಿಬಿದ್ದಿದ್ದು ಚಿನ್ನಾಭರಣವು ಮತ್ತೆ ಅವರ ಕೈ ಸೇರುವಂತಾಗಿದೆ. ಕಳ್ಳರು ಮರದ ಅಡಿಯಲ್ಲಿ ಗಂಟುಕಟ್ಟಿ ಇಟ್ಟಿದ್ದರು ಎಂದು ಪೊಲೀಸರ ವಿಚಾರಣೆಯ ವೇಳೆ ಬಾಯ್ದಿಟ್ಟಿದ್ದರು .

- Advertisement -

Latest News

error: Content is protected !!