Wednesday, July 15, 2026
Homeಕರಾವಳಿಉಡುಪಿಕುಂದಾಪುರ: ತಾಯಿಯ ಮಡಿಲಲ್ಲೇ ಕುಳಿತು ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗೆದ್ದ ಬಾಲಕಿ: ಸೋಶಿಯಲ್‌ ಮೀಡಿಯಾದಲ್ಲಿ...

ಕುಂದಾಪುರ: ತಾಯಿಯ ಮಡಿಲಲ್ಲೇ ಕುಳಿತು ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗೆದ್ದ ಬಾಲಕಿ: ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಯ್ತು ಬಾಲಕಿಯ ಪ್ರತಿಭೆ

- Advertisement -
- Advertisement -

ಕುಂದಾಪುರ: ಸಾಧನೆಗೆ ದೈಹಿಕ ನ್ಯೂನ್ಯತೆ ಅಡ್ಡಿಯಾಗಲ್ಲ ಎಂಬುದಕ್ಕೆ ಈ ಬಾಲಕಿಯೇ ಅದ್ಭುತ ಸಾಕ್ಷಿ. ಹುಟ್ಟಿನಿಂದಲೇ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡ ಬಾಲಕಿ ತಾಯಿಯ ಮಡಿಲಲ್ಲಿ ಕೂತು ಪ್ರತಿಭಾ ಕಾರಂಜಿಯ ಕಾರ್ಯಕ್ರಮದಲ್ಲಿ ಆಶುಭಾಷಣ ಸ್ವರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗೆದ್ದ ಕುಂದಾಪುರದ ಮಗುವಿನ ವೀಡಿಯೋ ಈಗ ಸಖತ್ ವೈರಲ್ ಆಗಿದೆ.

ಈಕೆ ಶ್ರೀಧರ್ ಹಾಗೂ ಗೀತ ದಂಪತಿಯ ಪುತ್ರಿ ಶ್ರೀರಕ್ಷಾ.  ನಾಡಾ ಗ್ರಾಮದ ಕಡ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ವಿದ್ಯಾರ್ಥಿನಿ. ಈಕೆಯ ಸ್ಥಿತಿ ಹೀಗಿದ್ರೂ ಶ್ರೀ ರಕ್ಷಾ ಕಲಿಕೆಯಲ್ಲಿ ತುಂಬಾನೆ ಮುಂದು. ಕ್ವಿಜ್, ಭಾಷಣ, ಹಾಡು ಹೀಗೆ ಶ್ರೀರಕ್ಷಾ ಎಲ್ಲದರಲ್ಲೂ ಮುಂದಿದ್ದಾಳೆ.. ಶ್ರೀರಕ್ಷಾ ಸಾಧನೆಗೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗಿದೆ.

- Advertisement -

Latest News

error: Content is protected !!