Wednesday, July 15, 2026
Homeತಾಜಾ ಸುದ್ದಿಬಾಲಿವುಡ್‌ಗೆ ಎಂಟ್ರಿ ಕೊಟ್ಟ ಮಂಗಳೂರು ಚೆಲುವೆ ಅಯ್ಯೋ ಶ್ರದ್ಧಾ

ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಮಂಗಳೂರು ಚೆಲುವೆ ಅಯ್ಯೋ ಶ್ರದ್ಧಾ

- Advertisement -
- Advertisement -

ಬಹುಮುಖ ಪ್ರತಿಭೆ ಶ್ರದ್ಧಾ, ಸೋಷಿಯಲ್ ಮೀಡಿಯಾದಲ್ಲಿ ಪಟ ಪಟ ಮಾತಿನ ಮೂಲಕ `ಅಯ್ಯೋ ಶ್ರದ್ಧಾ’ ಆಗಿ ಖ್ಯಾತಿಯಾಗಿದ್ದಾರೆ. ಮಂಗಳೂರು ಬ್ಯೂಟಿ ಶ್ರದ್ಧಾ ಪ್ರತಿಭೆ ಇದೀಗ ಬಿಟೌನ್‌ವರೆಗೂ ಮುಟ್ಟಿದೆ. ಬಾಲಿವುಡ್‌ನ ಸ್ಟಾರ್‌ ನಟನ ಜೊತೆ ಕನ್ನಡತಿ ಶ್ರದ್ಧಾಗೆ ನಟಿಸಲು ಚಾನ್ಸ್ ಸಿಕ್ಕಿದೆ.

ಮಂಗಳೂರು ಚೆಲುವೆ ಶ್ರದ್ಧಾ ಇದೀಗ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಬಾಲಿವುಡ್ ನಟ ಆಯುಷ್ಮಾನ್ ಖುರಾನ ಜೊತೆ `ಡಾಕ್ಟರ್ ಜಿ’ ಸಿನಿಮಾದಲ್ಲಿ ಶ್ರದ್ಧಾ ನಟಿಸುತ್ತಿದ್ದಾರೆ. ಈ ವಿಚಾರವನ್ನ ಸ್ವತಃ ಅವರೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೇಳಿದ್ದಾರೆ. ಆಯುಷ್ಮಾನ್ ಮತ್ತು ರಾಕುಲ್ ಪ್ರೀತ್ ಸಿಂಗ್ ಜತೆ ಶ್ರದ್ಧಾ ಕೂಡ ಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಡಾಕ್ಟರ್ ಪಾತ್ರದಲ್ಲಿ ಕನ್ನಡದ ನಟಿ ಕಾಣಿಸಿಕೊಳ್ಳುತ್ತಿದ್ದಾರೆ.

- Advertisement -

Latest News

error: Content is protected !!