Thursday, June 4, 2026
Homeಕರಾವಳಿಕಾಂತಾರ ಗೆಟಪ್‌ನಲ್ಲಿ ಬಂದು ಅಚ್ಚರಿ ಮೂಡಿಸಿದ ತಹಶೀಲ್ದಾರ್

ಕಾಂತಾರ ಗೆಟಪ್‌ನಲ್ಲಿ ಬಂದು ಅಚ್ಚರಿ ಮೂಡಿಸಿದ ತಹಶೀಲ್ದಾರ್

- Advertisement -
- Advertisement -

ಗುಂಟೂರು: ಕಾಂತಾರ ಚಿತ್ರ ಜಗತ್ತಿನಾದ್ಯಂತ ಪ್ರೇಕ್ಷಕರನ್ನು ಮೋಡಿ ಮಾಡಿದೆ. ದೇಶ, ಭಾಷೆಯನ್ನೂ ಮೀರಿ ಯಶಸ್ಸುಗಳಿಸಿದೆ. ಇದೀಗ ಕಾಂತಾರದ ಬಗ್ಗೆ ತೆಲುಗು ರಾಜ್ಯದಲ್ಲಿ ತಹಶೀಲ್ದಾರ್‌ ಒಬ್ಬರು ಅಭಿಮಾನ ವ್ಯಕ್ತಪಡಿಸಿದ ರೀತಿ ಕಂಡು ಎಲ್ಲರೂ ಬೆರಗಾಗಿದ್ದಾರೆ.

ಗುಂಟೂರಿನ ನಾಗಾರ್ಜುನ ಯೂನಿವರ್ಸಿಟಿಯಲ್ಲಿ ಆಂಧ್ರ ಪ್ರದೇಶ ತೆರಿಗೆ ಇಲಾಖೆಯ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದೆ. ಇದರಲ್ಲಿ ಹಲವು ಅಧಿಕಾರಿಗಳು ಭಾಗಿ ಆಗಿದ್ದಾರೆ. ಈ ವೇಳೆ ವಿಜಯನಗರಂ ಜಿಲ್ಲೆಯ ತಹಶೀಲ್ದಾರ್​ ಪ್ರಸಾದ್​ ರಾವ್​ ಅವರು ‘ಕಾಂತಾರ’ ಸಿನಿಮಾದ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರನ್ನು ಈ ಅವತಾರದಲ್ಲಿ ಕಂಡು ಅಲ್ಲಿದ್ದ ಎಲ್ಲರಿಗೂ ಅಚ್ಚರಿ ಆಗಿದೆ. ಈ ವೇಳೆ ಅವರು ‘ಕಾಂತಾರ’ ಚಿತ್ರದ ಡೈಲಾಗ್ ಕೂಡ ಹೇಳಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!