Saturday, May 18, 2024
Homeತಾಜಾ ಸುದ್ದಿಪ್ರಧಾನಿ ಮೋದಿ ಪ್ರವಾಸಕ್ಕಾಗಿ 34 ಕೋಟಿ ರೂ.ಖರ್ಚು ಮಾಡಿದ ರಾಜ್ಯ ಸರ್ಕಾರ

ಪ್ರಧಾನಿ ಮೋದಿ ಪ್ರವಾಸಕ್ಕಾಗಿ 34 ಕೋಟಿ ರೂ.ಖರ್ಚು ಮಾಡಿದ ರಾಜ್ಯ ಸರ್ಕಾರ

spot_img
- Advertisement -
- Advertisement -

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಬೆಂಗಳೂರು ಹಾಗೂ ಮೈಸೂರು ಪ್ರವಾಸಕ್ಕಾಗಿ ರಾಜ್ಯ ಸರಕಾರ ಒಟ್ಟು 34 ಕೋಟಿ ರೂ. ಖರ್ಚು ಮಾಡಿದ್ದು, ರಸ್ತೆ ಹಾಗೂ ಮೂಲಸೌಕರ್ಯ ಯೋಜನೆಗೆ ಈ ಹಣ ವಿನಿಯೋಗಿಸಲಾಗಿದೆ.

ಮೋದಿಯವರು ಬೆಂಗಳೂರಿನಲ್ಲಿ ಕೇವಲ ನಾಲ್ಕು ಗಂಟೆ ಮಾತ್ರ ಇದ್ದರು. ಇದಕ್ಕಾಗಿ ಬಿಬಿಎಂಪಿ ಭರ್ಜರಿ ಸಿದ್ಧತೆ ನಡೆಸಿತ್ತು. ನಗರದಲ್ಲಿ ಪ್ರಧಾನಿ ಸಂಚರಿಸಿದ ಪ್ರತಿ ರಸ್ತೆ ರಸ್ತೆಗಳನ್ನು ರಿಪೇರಿ ಮಾಡಿ ಹೊಳೆಯುವಂತೆ ಮಾಡಲಾಗಿದೆ. ಇದಕ್ಕಾಗಿ 14 ಕೋಟಿ ರೂ. ಖರ್ಚಾಗಿದೆ.

ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಈ ಬಗ್ಗೆ ಮಾಹಿತಿ ನೀಡಿ ಪ್ರಧಾನಿ ರಾಜ್ಯಕ್ಕೆ ಬರುತ್ತಿರುವುದೇ ನಮಗೆಲ್ಲ ಸಂತೋಷದ ವಿಚಾರವಾಗಿದೆ. ಆ ನಿಟ್ಟಿನಲ್ಲಿ ತುರ್ತು ಸಂದರ್ಭದಲ್ಲಿ ಅನುದಾನ ಬಳಸಬಹುದಾದ ವಿವೇಚನ ಅನುದಾನದಡಿ’ ಫುಟ್‌ಪಾತ್ ರಸ್ತೆ, ಕಾಮಗಾರಿ, ಡಾಂಬರೀಕರಣ, ಚರಂಡಿ, ಊಟ, ವಸತಿ ಕಲ್ಪಿಸಲು ನಿಟ್ಟಿನಲ್ಲಿ ಬರೊಬ್ಬರಿ 14 ಕೋಟಿ ಖರ್ಚು ಮಾಡಲಾಗಿದೆ ಎಂದು ಹೇಳಿದ್ದಾರೆ. ಮೈಸೂರಿನಲ್ಲೂ ರಸ್ತೆಗಳಿಗೆ ಹೊಸ ರೂಪವನ್ನೇ ನೀಡಲಾಗಿತ್ತು.ವಸತಿ,ಯೋಗ ಕಾರ್ಯಕ್ರಮಗಳ ಸಿದ್ಧತೆ, ಉಪಹಾರ ಸೇರಿದಂತೆ ಬರೋಬ್ಬರಿ ಇಪ್ಪತ್ತು ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

- Advertisement -
spot_img

Latest News

error: Content is protected !!