Thursday, June 4, 2026
Homeತಾಜಾ ಸುದ್ದಿರಾಜ್ಯ ರಾಜಧಾನಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು- ರೌಡಿಶೀಟರ್ ಮಂಜನ ಮೇಲೆ ಪೊಲೀಸರ ಶೂಟೌಟ್!.

ರಾಜ್ಯ ರಾಜಧಾನಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು- ರೌಡಿಶೀಟರ್ ಮಂಜನ ಮೇಲೆ ಪೊಲೀಸರ ಶೂಟೌಟ್!.

- Advertisement -
- Advertisement -

ಬೆಂಗಳೂರು:ಇಂದು ಬೆಳ್ಳಂಬೆಳಿಗ್ಗೆ ಪೊಲೀಸರು ನಾರಾಯಣನಗರ ಡಬಲ್ ರಸ್ತೆಯಲ್ಲಿ ಶೂಟೌಟ್ ನಡೆಸಿದ್ದಾರೆ.ಸುಮಾರು 23 ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿಶೀಟರ್ ಮಂಜನ ಮೇಲೆ ಶೂಟೌಟ್ ನಡೆದಿದೆ.ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆ ತಪ್ಪಿಸಿ ತಿರುಗುತ್ತಿದ್ದ.ಕೋಣನಕುಂಟೆ ಪ್ರದೇಶದಲ್ಲಿ ಆತ ಓಡಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಬಂದಿತ್ತು.

ಪೊಲೀಸರು ತನ್ನನ್ನು ಬಂಧಿಸಲು ಬರುತ್ತಿದ್ದಾರೆ ಎಂಬ ಸುಳಿವು ಪಡೆದ ಮಂಜ ತಮಿಳುನಾಡಿಗೆ ಪರಾರಿಯಾಗಲು ಪ್ರಯತ್ನಿಸಿದ್ದ.ರೌಡಿಶೀಟರ್ ಮಂಜನನ್ನು ಪೊಲೀಸರು ಬಂಧಿಸಲು ತೆರಳಿದ್ದಾಗ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದಾರೆ.

- Advertisement -

Latest News

error: Content is protected !!