Sunday, June 28, 2026
Homeಕರಾವಳಿಸುಬ್ರಹ್ಮಣ್ಯ: ವಿಷ ಸೇವಿಸಿದ್ದ ವ್ಯಕ್ತಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಸಾವು

ಸುಬ್ರಹ್ಮಣ್ಯ: ವಿಷ ಸೇವಿಸಿದ್ದ ವ್ಯಕ್ತಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಸಾವು

- Advertisement -
- Advertisement -

ಸುಬ್ರಹ್ಮಣ್ಯ: ವಿಷ ಸೇವಿಸಿದ್ದ ವ್ಯಕ್ತಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಸಾವನ್ನಪ್ಪಿರುವ ಘಟನೆ ಏನೆಕಲ್ಲು ಎಂಬಲ್ಲಿ ನಡೆದಿದೆ. ಸುಬ್ರಹ್ಮಣ್ಯದ ಏನೆಕಲ್ಲು ಗ್ರಾಮದ ತುಂಬತ್ತಾಜೆಯ ಬಾಲಕೃಷ್ಣ ಗೌಡ ಮೃತ ದುರ್ದೈವಿ.

ಕೃಷಿ ಕೆಲಸ ಮಾಡಿಕೊಂಡಿದ್ದ ಬಾಲಕೃಷ್ಣ ಗೌಡ ಅವರು  ರಕ್ತದೊತ್ತಡದಿಂದ ಬಳಲುತ್ತಿದ್ದರು. ಪಂಜದ ವೈದ್ಯರೊಬ್ಬರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಡಿಮೆಯಾಗಿರಲಿಲ್ಲ. ಇದರಿಂದ ಬೇಸರಗೊಂಡಿದ್ದರು ಎನ್ನಲಾಗಿದೆ.  ಜ.6 ರಂದು ಮನೆಯವರಿಗೆ   ವಾಂತಿ ಬರುವುದಾಗಿ ತಿಳಿಸಿದ್ದು,  ಉಪಚರಿಸಿ ಕಾಣಿಯೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ವಾಂತಿ ಮಾಡಿಕೊಂಡಿದ್ದರು.

ವಿಚಾರಿಸಿದಾಗ ಇಲಿ ಪಾಷಾಣ ಸೇವಿಸಿರುವುದಾಗಿ ತಿಳಿಸಿದ್ದಾರೆ. ಬಳಿಕ ಕಾಣಿಯೂರಿನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ವೈಧ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ  ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಮೃತಪಟ್ಟಿದರೋದಾಗಿ ತಿಳಿಸಿದ್ದಾರೆ.ಮೃತರ ಮಗ ಕುಲ್ಕುಂದದ  ಸತ್ಯನಾರಾಯಣ  ಎಂಬವರು ನೀಡಿದ ದೂರಿನಂತೆ   ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!