- Advertisement -
- Advertisement -
ಗದಗ ಜಿಲ್ಲೆಯ ಘಟನೆ ಮುಂಡರಗಿ ಪಟ್ಟಣದಲ್ಲಿ ತಂಗಿಯನ್ನು ಬರ್ಬರವಾಗಿ ಆಸ್ತಿ ವಿಚಾರಕ್ಕಾಗಿ ಅಣ್ಣನೊಬ್ಬ ಕೊಲೆ ಮಾಡಿದ್ದು, ನಂತರ ಪೊಲೀಸರಿಗೆ ಶರಣಾದ ಸೆ.24ರ ಮಂಗಳವಾರ ನಡೆದಿದೆ.
ಕೊಲೆಗೀಡಾದ ಮಹಿಳೆ ಕಾವ್ಯಾ (32) ಎಂದು ಗುರುತಿಸಲಾಗಿದೆ. ಆರೋಪಿಯನ್ನ ಈಶಪ್ಪ ಕ್ಯಾದಗಿಹಳ್ಳಿ ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಯುವತಿ ಕಾವ್ಯಾ ಅನ್ಯಕೋಮಿನ ಯುವಕ ಪ್ರಶಾಂತ ಹಡಪದ (37) ಎಂಬವರ ಜೊತೆ ಮದುವೆಯಾಗಿದ್ದು, ಆಸ್ತಿಗಾಗಿ ಅಣ್ಣ ಈಶಪ್ಪನ ವಿರುದ್ಧ ಕೇಸ್ ದಾಖಲಿಸಲು ಮುಂದಾಗಿದ್ದಳು. ಈ ನಡುವೆ ಮನೆಗೆ ಬಂದ ತಂಗಿ ಕಾವ್ಯಾ, ಅಣ್ಣ ಈಶಪ್ಪನೊಂದಿಗೆ ವಾಗ್ವಾದ ನಡೆಸಿದ್ದಾಳೆ ಎನ್ನಲಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಅಣ್ಣ ತಂಗಿಯನ್ನು ಮಾರಕಾಸ್ತ್ರಗಳಿಂದ ಕೊಲೆಗೈದು ತಾನೇ ಪೊಲೀಸರಿಗೆ ಶರಣಾಗಿದ್ದಾನೆ.
ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಎಂ.ಬಿ. ಸಂಕದ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -