Friday, October 4, 2024
Homeಆರಾಧನಾಕರಾವಳಿಯ ಅಸ್ಮಿತೆಯೇ ದೈವಾರಾಧನೆ; ಜಿಲ್ಲಾಸ್ಪತ್ರೆಯ ಅಧಿಕಾರಿಗಳಿಂದ ಆಸ್ಪತ್ರೆಯ ಮುಂಭಾಗದಲ್ಲಿಯೇ ಗುಳಿಗ ದೈವ ಪ್ರತಿಷ್ಠೆ

ಕರಾವಳಿಯ ಅಸ್ಮಿತೆಯೇ ದೈವಾರಾಧನೆ; ಜಿಲ್ಲಾಸ್ಪತ್ರೆಯ ಅಧಿಕಾರಿಗಳಿಂದ ಆಸ್ಪತ್ರೆಯ ಮುಂಭಾಗದಲ್ಲಿಯೇ ಗುಳಿಗ ದೈವ ಪ್ರತಿಷ್ಠೆ

spot_img
- Advertisement -
- Advertisement -

ಮಂಗಳೂರು: ಇಲ್ಲಿನ ಹಂಪನಕಟ್ಟೆಯಲ್ಲಿರುವ ವೆನ್ಲಾಕ್ ಜಿಲ್ಲಾಸ್ಪತ್ರೆಯ ನೂತನ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ಕಟ್ಟಡದ ಮುಂಭಾಗದಲ್ಲಿ ಗುಳಿಗ ಸಾನಿಧ್ಯವನ್ನು ಸ್ಥಾಪಿಸಿ ಆರಾಧಿಸಲಾಗುತ್ತಿದೆ.

ಆಸ್ಪತ್ರೆಯ ನೂತನ ಕಟ್ಟಡ ಪ್ರಾರಂಭವಾದ ಮೇಲೆ ಕಾರ್ಮಿಕರಿಗೆ ಮತ್ತು ಆಸ್ಪತ್ರೆಯ ಸಿಬ್ಬಂದಿಗಳಿಗೆ ಹಲವಾರು ಸಮಸ್ಯೆಗಳು ಎದುರಾಗುತ್ತಿದ್ದು, ಕಟ್ಟಡ ನಿರ್ಮಾಣವಾಗುತ್ತಿರುವಾಗ ಹಲವು ಅಸಹಜ ಸಾವುಗಳು ಸಂಭವಿಸಿತ್ತು.

ಇನ್ನು ಆಸ್ಪತ್ರೆಯ ಮುಂಭಾಗದಲ್ಲಿಯೇ ಸಿಬ್ಬಂದಿಗಳಿಗೆ ದೈವ್ಯ ಸಾನಿಧ್ಯವು ಗೋಚರವಾಗಿದ್ದು, ಈ ಕುರಿತಂತೆ ಪ್ರಶ್ನೆ ಮಾಡಲಾಗಿದೆ. ಆ ವೇಳೆಯಲ್ಲಿ ಕಾಮಗಾರಿ ನಡೆಯುವ ಸ್ಥಳದ ಹಿಂದೆ ಗುಳಿಗ ಸಾನಿಧ್ಯ ಇದ್ದ ಬಗ್ಗೆ ಮಾಹಿತಿ ಲಭಿಸಿದೆ.

ದಲಿತ ಕುಟುಂಬಗಳು ಈ ಜಾಗದಲ್ಲಿ ಸುಮಾರು 10 ವರ್ಷಗಳ ಹಿಂದೆ ಇಲ್ಲಿ ಐದು ದೈವಗಳನ್ನು ನಂಬಿಕೊಂಡು ಆರಾಧಿಸಿಕೊಂಡು ನೆಲೆಸಿದ್ದರು. ಈ ಜಾಗವನ್ನು ಸರ್ಕಾರವು ಕಾಲಕ್ರಮೇಣ ಸ್ವಾಧೀನಪಡಿಸಿದ್ದು, ಮಂಗಳೂರು ನಗರ ಹೊರವಲಯದ ವಾಮಂಜೂರಿನಲ್ಲಿ ಆ ದಲಿತ ಕುಟುಂಬಗಳಿಗೆ ನಿವೇಶನ ಒದಗಿಸಲಾಗಿತ್ತು. ಈ ಸಂದರ್ಭದಲ್ಲಿ ದಲಿತ ಕುಟುಂಬದವರು ನಂಬಿದ್ದಂತಹ ದೈವಗಳನ್ನು ಸ್ಥಳದಿಂದ ತಾವು ನೆಲೆಸಿದ ಜಾಗಕ್ಕೆ ಕೊಂಡುಹೋಗಿದ್ದರೂ, ಗುಳಿಗ ದೈವ ಮಾತ್ರ ತನ್ನ ಸ್ಥಳ ಸಾನಿಧ್ಯವನ್ನು ಅಲ್ಲಿಂದ ಬಿಟ್ಟು ಹೋಗಿರಲಿಲ್ಲ.

ಗುಳಿಗ ತನ್ನ ಜಾಗ ಬದಲಿಸದೇ ಶರವು ಶ್ರೀ ಮಹಾಗಣಪತಿ ದೇವಸ್ಥಾನದ ವ್ಯಾಪ್ತಿಗೆ ಬರುವ ಆ ಜಾಗದ ಅಶ್ವಥಮರದಲ್ಲಿ ನೆಲೆಯಾಗಿತ್ತು. ಆದರೆ ಗುಳಿಗ ನೆಲೆಯಾಗಿದ್ದ ಮರವನ್ನು ಕಟ್ಟಡ ನಿರ್ಮಾಣ ಕಾಮಗಾರಿ ವೇಳೆಯಲ್ಲಿ ನೆಲೆಸಮಗೊಳಿಸಲಾಗಿದೆ. ಇದರಿಂದ ದೈವಕ್ಕೆ ನೆಲೆ ಇಲ್ಲದೆ ಆ ಭಾಗದಲ್ಲಿ ಸಮಸ್ಯೆಯನ್ನು ಉಂಟು ಮಾಡಿತ್ತು. ಕಾಮಗಾರಿ ನಡೆಯುವ ವೇಳೆಯಲ್ಲಿ ನಾಗ ಹತ್ಯೆಯೂ ಆಗಿರೋದು ತಿಳಿದು ಬಂದಿರುವ ಹಿನ್ನಲೆಯಲ್ಲಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಮತ್ತು ಅಧಿಕಾರಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಆಸ್ಪತ್ರೆಯ ಮೂತ್ರ ರೋಗ ತಜ್ಞ ಡಾ.ಸದಾನಂದ ಪೂಜಾರಿ ನೇತೃತ್ವದಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ಆರಂಭ ಮಾಡಿ ದೈವದ ಪುನರ್ ಪ್ರತಿಷ್ಠೆ ಮಾಡಿದ್ದಾರೆ. ಸಿಬ್ಬಂದಿಗಳು ತಮ್ಮ ಕೈಲಾದ ಹಣವನ್ನು ಧಾರ್ಮಿಕ ಚಟುವಟಿಕೆಗಳಿಗೆ ನೀಡಿದ್ದಾರೆ. ಅಶ್ವಥ ಮರವನ್ನು ಬುಡಸಮೇತವಾಗಿ ಸ್ಥಳಾಂತರ ಮಾಡಲಾಗಿದೆ. ವಿಶೇಷವೇನೆಂದರೆ ಮರ ಒಂದು ಚೂರು ಬಾಡದೇ ಸದ್ಯ ಹಸಿರಿನಿಂದ ನಳನಳಿಸುತ್ತಿದೆ ಎಂದು ತಿಳಿದು ಬಂದಿದೆ.

ಇನ್ನು ಆಸ್ಪತ್ರೆಯ ಹೊರಭಾಗದಲ್ಲಿ ಗುಳಿಗನ ಪ್ರತಿಷ್ಠೆ ನಡೆದ ಬಳಿಕ ಆಸ್ಪತ್ರೆಯ ಒಳಭಾಗದಲ್ಲಿ ಆಶ್ಲೇಷಾ ಬಲಿ ಪೂಜೆ ಮಾಡಲಾಗಿದೆ. ಪ್ರತೀ ಸಂಕ್ರಮಣದದಂದು ದೀಪ, ಸೀಯಾಳ, ಹೂವು ಇಟ್ಟು ಪ್ರತಿ ವರ್ಷದ ಒಂದು ದಿನ ಪರ್ವ ಸೇವೆ ಮಾಡುವುದೆಂದು ತೀರ್ಮಾನ ಮಾಡಲಾಗಿದೆ. ಗುಳಿಗ ಸಾನಿಧ್ಯ ಪ್ರತಿಷ್ಠೆ ಮಾಡಿದ ಬಳಿಕ ಆಸ್ಪತ್ರೆ ಯ ಕೆಲಸಗಳು ವೇಗ ಪಡೆದಿದೆ. ಕ್ಯಾಶುವಲ್ಲಿ ಸೇರಿದಂತೆ ಹಲವು ವಿಭಾಗಗಳು ನೂತನ ಕಟ್ಟಡಕ್ಕೆ ಸ್ಥಳಾಂತರವಾಗಿದೆ.

- Advertisement -
spot_img

Latest News

error: Content is protected !!