Sunday, June 7, 2026
Homeಕರಾವಳಿಮಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ಸುಳ್ಯದ ವಿದ್ಯಾರ್ಥಿ ಸಾವು

ಮಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ಸುಳ್ಯದ ವಿದ್ಯಾರ್ಥಿ ಸಾವು

- Advertisement -
- Advertisement -

ಸುಳ್ಯ: ಮಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ಸುಳ್ಯದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ. ಗ್ರಾಮದ ನೆಡ್ಚಿಲು ವಾಸುದೇವ ಗೌಡ ರವರ ಪುತ್ರ ಇಂಜಿನಿಯರಿಂಗ್ ವಿದ್ಯಾರ್ಥಿ ಸೇವಂತ್ ನೆಡ್ಚಿಲು  ಮೃತ ದುರ್ದೈವಿ. ಮಂಗಳೂರಿನ ಮಾರಿಪಳ್ಳದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸೇವಂತ್ ಸಾವನ್ನಪ್ಪಿದ್ದಾನೆ.

ಪುತ್ತೂರಿನಿಂದ ಮಂಗಳೂರು ಕಡೆಗೆ ಗೆಳೆಯರೊಂದಿಗೆ ಬೈಕಿನಲ್ಲಿ ಹೋಗುತ್ತಿರುವಾಗ ಮಾರಿಪಳ್ಳ ಎಂಬಲ್ಲಿ ಟಿಪ್ಪರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸೇವಂತ್ ರವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡರು. ಅಲ್ಲಿಂದ ಅವರನ್ನು ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

ತಲೆಗೆ ವಿಪರೀತ ಏಟಾಗಿದ್ದರಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ. ಮೃತರು ತಂದೆ ವಾಸುದೇವ ಗೌಡ ನೆಡ್ಚಿಲು, ತಾಯಿ ಶೋಭಾ ನೆಡ್ಚಿಲು ಹಾಗೂ ಸಹೋದರ ಲೋಚನ್ ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.

- Advertisement -

Latest News

error: Content is protected !!