Tuesday, June 9, 2026
Homeತಾಜಾ ಸುದ್ದಿಮದುವೆಯ ಖುಷಿ ಮರೆಯುವ ಮುನ್ನ ನವವಿವಾಹಿತೆಯ ನಿಗೂಢ ಸಾವು!..

ಮದುವೆಯ ಖುಷಿ ಮರೆಯುವ ಮುನ್ನ ನವವಿವಾಹಿತೆಯ ನಿಗೂಢ ಸಾವು!..

- Advertisement -
- Advertisement -

ಬೆಂಗಳೂರು: ಇಲ್ಲಿನ ನವಜೋಡಿಯೊಂದು ಹಸೆಮಣೆ ಏರಿ ಒಂಬತ್ತು ತಿಂಗಳು ಕಳೆಯುವ ಮುನ್ನ ಮಡದಿ ನಿಗೂಢವಾಗಿ ಮೃತಪಟ್ಟಿದ್ದಾಳೆ . ನವವಿವಾಹಿತೆ ನಿಗೂಢ ಸಾವಿಗೆ ಪತಿಯೇ ಕಾರಣ ಎಂದು ಆಕೆಯ ಪೋಷಕರು ಹೇಳುತ್ತಿದ್ದಾರೆ.ಅಶ್ವಿನಿ ಸಾವನ್ನಪ್ಪಿದ ಮಹಿಳೆ.25ರ ಹರೆಯದ ಯುವತಿಯನ್ನು ಪತಿ ಯುವರಾಜ್.

ಕಾಲೇಜುದಿನಗಳಿಂದಲೇ ಹಿಂದೆ ಸುತ್ತಿ ಪ್ರೀತಿ-ಪ್ರೇಮ ಅಂತಾ ನಂಬಿಸಿಮದುವೆಗೆ ಒತ್ತಾಯಿಸಿದ್ದಾನೆ. ತಂದೆಯನ್ನ ಕಳೆದುಕೊಂಡು ತಾಯಿ ಆಸರೆಯಲ್ಲಿದ್ದ ಅಶ್ವಿನಿ ಅಮ್ಮನನ್ನ ಒಪ್ಪಿಸಿ ಕಳೆದ ಫೆಬ್ರವರಿಯಲ್ಲಿ ಮದುವೆಯಾಗಿದ್ದರು.ಯುವರಾಜ್ ಉದ್ಯೋಗ ಕಳೆದುಕೊಂಡ ಬಳಿಕ ಸ್ನೇ ಸಂಸಾರದಲ್ಲಿ ಬಿರುಕು ಕಾಣಲಾರಂಭಿಸಿ ಏರುಪೇರು ಶುರುವಾಗಿದೆ‌. ಯುವರಾಜ್ ನನ್ನ ಪತ್ನಿ ಅಶ್ವಿನಿಯೇ ಕೆಲಸ‌ ಮಾಡಿ ಸಾಕುತ್ತಿದ್ದರಂತೆ. ಬಳಿಕ ತನ್ನ ಹಾಗೂ ಪತ್ನಿಯ ಬಗ್ಗೆ ಜ್ಯೋತಿಷಿ ಬಳಿ ಭವಿಷ್ಯ ಕೇಳಿದ್ದಾನೆ.‌ ಈ ವೇಳೆ ಜ್ಯೋತಿಷಿ ನಿನಗೆ ಮಕ್ಕಳಾಗಲ್ಲ ಅಂತ ಹೇಳಿದ್ದನಂತೆ.

ಇದನ್ನೆ ನೆಪಮಾಡಿಕೊಂಡ ಯುವರಾಜ್ ನಿಂಗೆ ಮಕ್ಕಳಾಗಲ್ಲ ಅಂತಾ ಜರಿಯೋದಕ್ಕೆ ಮುಂದಾಗಿದ್ದನಂತೆ., ವರದಕ್ಷಿಣೆ ಬೇಕು ಸಾಲ‌ಮಾಡಿಯಾದರೂ ತಂದು‌ಕೊಡು ಅಂತಾ ಪೀಡಿಸುತ್ತಿದ್ದ‌. ಶುಕ್ರವಾರ ರಾತ್ರಿಯೂ ಜಗಳ ನಡೆದಿದೆ. ಪತಿ ಯುವರಾಜ್ ಬೆಳಗ್ಗೆ ಕೂಡ ಪತ್ನಿ ಅಶ್ವಿನಿ‌ ಮೇಲೆ ಹಲ್ಲೆ ನಡೆಸಿದ್ದ ಕುರಿತು ತಂಗಿ ವರ್ಷಿಣಿಗೆ ಕರೆ‌ಮಾಡಿ ಅಳುತ್ತಾ ಸಂಕಟ ಹೇಳಿಕೊಂಡಿದ್ದಾಳೆ.

ಕೆಲವೇ ಹೊತ್ತಿನಲ್ಲಿ ಅಶ್ವಿನಿ ಸಿರೀಯಸ್ ಆಗಿದ್ದು, ಆಸ್ಪತ್ರೆಗೆ ದಾಖಲಿಸಿರುವುದಾಗಿ ಪತಿ ಯುವರಾಜ್ ಸಂಬಂಧಿಕರಿಗೆ ತಿಳಿಸಿದ್ದಾರೆ. ಪೋಷಕರು ಆಸ್ಪತ್ರೆಗೆ ಬಂದು ನೋಡುವಷ್ಟರಲ್ಲಿ ಮಗಳು ಶವವಾಗಿದ್ದಾಳೆ.ಅಶ್ವಿನಿ ಮೃತದೇಹದ ಮೇಲೆ ಗಾಯಾದ ಗುರುತುಗಳಿದ್ದು, ಯುವರಾಜ್ ನೇಣು ಹಾಕಿ ಆತ್ಮಹತ್ಯೆಯಂತೆ ಬಿಂಬಿಸಿದ್ದಾರೆಂದು ಮನೆಯವರು ಆರೋಪಿಸಿದ್ದಾರೆ.ಘಟನೆ ಕುರಿತು ಹೆಣ್ಣೂರು ಠಾಣೆಯಲ್ಲಿ‌ ಕೇಸ್ ದಾಖಲಾಗಿದ್ದು, ಆರೋಪಿ ಯುವರಾಜ್ ವಶಕ್ಕೆ ಪಡೆದಿರುವ ಪೊಲೀಸರು ತನಿಖೆನಡೆಸುತ್ತಿದ್ದಾರೆ.

- Advertisement -

Latest News

error: Content is protected !!