Saturday, June 13, 2026
Homeತಾಜಾ ಸುದ್ದಿರಾಗಿಣಿ ಹಾಗೂ ಸಂಜನಾಗೆ ಬೇಕಂತೆ ದೀಪಾವಳಿ ಹಬ್ಬಕ್ಕೆ ಸಿಹಿ ಮತ್ತು ಹೊಸ ಬಟ್ಟೆ!..ನಟಿಮಣಿಯರ ಗಲಾಟೆಗೆ ಅಧಿಕಾರಿಗಳು...

ರಾಗಿಣಿ ಹಾಗೂ ಸಂಜನಾಗೆ ಬೇಕಂತೆ ದೀಪಾವಳಿ ಹಬ್ಬಕ್ಕೆ ಸಿಹಿ ಮತ್ತು ಹೊಸ ಬಟ್ಟೆ!..ನಟಿಮಣಿಯರ ಗಲಾಟೆಗೆ ಅಧಿಕಾರಿಗಳು ಸುಸ್ತು

- Advertisement -
- Advertisement -

ಬೆಂಗಳೂರು: ಈಗಾಗಲೇ ಮಾದಕ ವಸ್ತು ಪ್ರಕರಣದಲ್ಲಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರು ತಮಗೆ ದೀಪಾವಳಿ ಹಬ್ಬಕ್ಕೆ ಹೊಸ ಬಟ್ಟೆಹಾಗೂ ಸಿಹಿ ಕೊಡಿಸುವಂತೆ ಜಗಳವಾಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ನಮ್ಮ ಪೋಷಕರನ್ನು ಭೇಟಿಯಾಗಲು ಅವಕಾಶ ಕೊಡಿ ಎಂದು ಅಧಿಕಾರಿಗಳಿಗೆ ನಟಿಯರು ವಿನಂತಿಸಿದ್ದಾರೆ ಎನ್ನಲಾಗಿದೆ.

ಆದರೆ ಅಧಿಕಾರಿಗಳು ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಜೈಲಿನಲ್ಲಿ ಹೊರಗಿನವರ ಸಂದರ್ಶನವನ್ನು ರದ್ದುಪಡಿಸಲಾಗಿದೆ ಎಂದು ಇವರಿಬ್ಬರಿಗೆ ಮನವರಿಕೆ ಮಾಡಿದ್ದಾರೆ. ಆದರೆ ಸಂಜನಾ ರಾಗಿಣಿ ‘ನಮಗೆ ದೀಪಾವಳಿ ಹಬ್ಬಕ್ಕೆ ಹೊಸ ಬಟ್ಟೆ ಹಾಗೂ ಸಿಹಿಯನ್ನು ಕೊಡಿಸಿ’ ಎಂದು ಪಟ್ಟು ಹಿಡಿದುಕೂತಿದ್ದರು. ಕೊನೆಗೆ ಅಧಿಕಾರಿಗಳು, ಜೈಲಿನಲ್ಲಿ ಹಬ್ಬಕ್ಕೆ ಸಿಹಿ ಮಾಡಿಸಲಾಗುತ್ತದೆ ಎಂದು ಇವರಿಬ್ಬರನ್ನು ಸಮಾಧಾನ ಪಡಿಸಿದ್ದಾರೆ.

- Advertisement -

Latest News

error: Content is protected !!