Friday, May 3, 2024
Homeಕರಾವಳಿಉಡುಪಿಗಂಗೊಳ್ಳಿ: ಹಿಂದೂ ಜಾಗರಣ ವೇದಿಕೆಯ ದುರ್ಗಾ ದೌಡ್ ಬ್ಯಾನರ್ ಹರಿದ ಕಿಡಿಗೇಡಿಗಳು

ಗಂಗೊಳ್ಳಿ: ಹಿಂದೂ ಜಾಗರಣ ವೇದಿಕೆಯ ದುರ್ಗಾ ದೌಡ್ ಬ್ಯಾನರ್ ಹರಿದ ಕಿಡಿಗೇಡಿಗಳು

spot_img
- Advertisement -
- Advertisement -

ಗಂಗೊಳ್ಳಿ: ಎಸ್ಡಿಪಿಐ ಕಚೇರಿ ಹಿಂಬಾಗ ಹಿಂದೂ ಜಾಗರಣ ವೇದಿಕೆ ಅಳವಡಿಸಿದ್ದ ದುರ್ಗಾ ದೌಡ್ ಬ್ಯಾನರ್ ಹರಿದು ಕಿಡಿಗೇಡಿಗಳು ಪುಂಡಾಟ ಮೆರೆದಿರುವ ಘಟನೆ ಬೈಂದೂರಿನ ಗಂಗೊಳ್ಳಿಯಲ್ಲಿ ನಡೆದಿದೆ.

ಅಕ್ಟೋಬರ್ 2 ರಂದು ಉಡುಪಿಯಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ನಡೆಯಲಿರುವ ದುರ್ಗಾ ದೌಡ್ ಕಾರ್ಯಕ್ರಮಕ್ಕೆ ಶುಭಕೋರಿ ಗಂಗೊಳ್ಳಿ ಠಾಣಾ ವ್ಯಾಪ್ತಿಯ  ಗಂಗೊಳ್ಳಿ-  ಮೇಲ್ ಗಂಗೊಳ್ಳಿ ದಾಕುಹಿತ್ಲು ಹೋಗುವ ಮಾರ್ಗ ದಲ್ಲಿ ಬ್ಯಾನರ್‌ ಅಳವಡಿಸಲಾಗಿತ್ತು. ಇದನ್ನು ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಸ್ಥಳಕ್ಕೆ ಗಂಗೊಳ್ಳಿ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -
spot_img

Latest News

error: Content is protected !!