Wednesday, July 2, 2025
Homeಕರಾವಳಿಉಡುಪಿಹೆಬ್ರಿ: ದೇವಸ್ಥಾನ ಮತ್ತು ನಾಗಬನ ಸಮೀಪವೇ ಮಾಂಸದೂಟ: ಮುಸ್ಲಿಂ ಕುಟುಂಬವನ್ನ ತರಾಟೆಗೆ ತೆಗೆದುಕೊಂಡ ಹಿಂದೂ ಕಾರ್ಯಕರ್ತರು

ಹೆಬ್ರಿ: ದೇವಸ್ಥಾನ ಮತ್ತು ನಾಗಬನ ಸಮೀಪವೇ ಮಾಂಸದೂಟ: ಮುಸ್ಲಿಂ ಕುಟುಂಬವನ್ನ ತರಾಟೆಗೆ ತೆಗೆದುಕೊಂಡ ಹಿಂದೂ ಕಾರ್ಯಕರ್ತರು

spot_img
- Advertisement -
- Advertisement -

ಹೆಬ್ರಿ: ಹೆಬ್ರಿ ಸಮೀಪದ ಸೋಮೇಶ್ವರ ಸೀತಾನದಿ ತಟದಲ್ಲಿ ದೇವಸ್ಥಾನ ಮತ್ತು ನಾಗಬನದ ಪಕ್ಕದಲ್ಲೇ ಮಾಂಸದೂಟ ತಯಾರಿ ಮಾಡಿದ್ದಕ್ಕೆ  ಹಿಂದೂ ಸಂಘಟನೆ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.

ಪ್ರವಾಸಕ್ಕೆಂದು ಬಂದಿದ್ದ ಮುಸ್ಲಿಂ ಕುಟುಂಬವು ಮಂದಿರ ಮತ್ತು ನಾಗಬನದ ಬಳಿ ಮಾಂಸದೂಟ ಮಾಡಿದೆ ಎಂಬ ವಿಷಯಕ್ಕೆ ಸಂಬಂಧಿಸಿ ಈ ಜಗಳ ನಡೆದಿದೆ.ಮಾಂಸದೂಟ ತಿಂದರೆ ನಾಗಬನದ ಪಾವಿತ್ರ್ಯತೆ ಹಾಳಾಗುತ್ತದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಳಿಕ ಈ ವಿಷಯ ತಿಳಿದು ಶ್ರೀರಾಮ ಸೇನೆ ಕಾರ್ಯಕರ್ತರು ಸ್ಥಳಕ್ಕೆ ಬಂದು ಮುಸ್ಲಿಂ ಕುಟುಂಬವನ್ನು ತರಾಟೆಗೆ ತೆಗೆದುಕೊಂಡರು. ಪಕ್ಕದಲ್ಲೇ ನಾಗಬನ ಮತ್ತು ಮಂದಿರ ಇರುವುದನ್ನು ಗಮನಿಸಿಯೂ  ಈ ರೀತಿ ಮಾಡಿರುವ ಕುರಿತು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!