Tuesday, June 30, 2026
Homeಉತ್ತರ ಕನ್ನಡಅಂಬ್ಯುಲೆನ್ಸ್ ಅಡಿಗೆ ಬಿದ್ದು ಸಾವನ್ನಪ್ಪಿದ ನಾಯಿ: ಅಮ್ಮನ ಸಾವಿಗೆ ಸೇಡು ತೀರಿಸಿಕೊಳ್ಳಲು ಕಳೆದ ಒಂದು ವರ್ಷದಿಂದ...

ಅಂಬ್ಯುಲೆನ್ಸ್ ಅಡಿಗೆ ಬಿದ್ದು ಸಾವನ್ನಪ್ಪಿದ ನಾಯಿ: ಅಮ್ಮನ ಸಾವಿಗೆ ಸೇಡು ತೀರಿಸಿಕೊಳ್ಳಲು ಕಳೆದ ಒಂದು ವರ್ಷದಿಂದ ಕಾಯುತ್ತಿದೆ ನಾಯಿ ಮರಿ 

- Advertisement -
- Advertisement -

ಉತ್ತರಕನ್ನಡ: ತಾಯಿಯ ಸಾವಿಗೆ ಕಾರಣವಾದ ಆಂಬ್ಯುಲೆನ್ಸ್  ಮೇಲೆ ಸೇಡು ತೀರಿಕೊಳ್ಳಲು ಕಳೆದ ಒಂದು ವರ್ಷದಿಂದ ನಾಯಿ ಮರಿಯೊಂದು ಕಾಯುತ್ತಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್ ಬಳಿ ನಡೆದಿದೆ.

ಕಳೆದ ವರ್ಷ ಹಿಂದೆ ತಾಯಿ ‌ನಾಯಿ ತನ್ನ ಮರಿಗಳಿಗೆ ಹಾಲುಣಿಸುವ ಸಂದರ್ಭದಲ್ಲಿ ವಿಐಪಿ  ಲೇನ್ ನಿಂದ ಬಂದ ಅಂಬ್ಯುಲೇನ್ಸ್ ಅಡಿಗೆ ಬಿದ್ದು ಸಾವನ್ನಪ್ಪಿತ್ತು. ಅಂದಿನಿಂದ ತಾಯಿಯ ಸಾವಿಗೆ ಕಾರಣವದ ಆಂಬ್ಯುಲೆನ್ಸ್ ವಿರುದ್ಧ ಸೇಡಿ ತೀರಿಸಿಕೊಳ್ಳಲು ಕಾಯುತ್ತಲೇ ಇದೆ ಮರಿ ನಾಯಿ.

ತಾಯಿಯ ಸಾವಿನ ಸೇಡು ತೀರಿಸಿಕೊಳ್ಳಲು ಸೈರನ್ ಹಾಕಿ ವಿಐಪಿ ಲೇನ್ ನಿಂದ ಬರುವ ಎಲ್ಲ ಅಂಬ್ಯುಲೇನ್ಸ್ ವಾಹನಕ್ಕೂ ಅಡ್ಡಗಟ್ಟುತ್ತದೆ. ಕೇವಲ ಅಂಬ್ಯುಲೇನ್ಸ್ ಅಷ್ಟೇ ಅಲ್ಲದೆ ಪೋಲಿಸ್ ವಾಹನವನ್ನೂ ಅಡ್ಡಗಟ್ಟುತ್ತದೆ. ವಿಐಪಿ ಲೇನ್ ನಿಂದ ಸೈರನ್ ಹಾಕಿ ಬರುವ ವಾಹನಗಳ ಮೇಲೆ ಮಾತ್ರ‌ ನಾಯಿ ಎರಗುತ್ತದೆ. ಸೈರನ್ ಶಬ್ಧ ಕೀವಿಗೆ ಬೀಳುತ್ತಿದ್ದಂತೆ ಎಲ್ಲೆ ಇದ್ರು ಓಡೋಡಿ ಬಂದು ಅಂಬ್ಯುಲೇನ್ಸ್ ವಾಹನಕ್ಕೆ ಅಡ್ಡಗಟ್ಟಿ ತನ್ನ ತಾಯಿಯ ಸಾವಿನ ಪ್ರತಿಕಾರ ತೀರಿಸಿಕೊಳ್ಳಲು ಹವಣಿಸುತ್ತಿದೆ. ಪ್ರತಿದಿನ ನಾಯಿ ಆಂಬ್ಯುಲೆನ್ಸ್ ಬರುವಾಗ ಈ ರೀತಿ ಕೋಪದಿಂದ ಓಡಿ ಬರುವ ದೃಶ್ಯ ಸಾಮಾನ್ಯವಾಗಿದೆ.

- Advertisement -

Latest News

error: Content is protected !!