Tuesday, April 30, 2024
Homeಕರಾವಳಿಪುತ್ತೂರು: ಕೃಷಿ ಜಮೀನನ್ನು ನೋಡಲು ಬಂದಿದ್ದ ವ್ಯಕ್ತಿ ನಾಪತ್ತೆಯಾಗಿರುವ ಪ್ರಕರಣಕ್ಕೆ ಹೊಸ ತಿರುವು ...!

ಪುತ್ತೂರು: ಕೃಷಿ ಜಮೀನನ್ನು ನೋಡಲು ಬಂದಿದ್ದ ವ್ಯಕ್ತಿ ನಾಪತ್ತೆಯಾಗಿರುವ ಪ್ರಕರಣಕ್ಕೆ ಹೊಸ ತಿರುವು …!

spot_img
- Advertisement -
- Advertisement -

ಪುತ್ತೂರು: ಕೃಷಿ ಜಮೀನನ್ನು ನೋಡಲು ಬಂದಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ನಾಪತ್ತೆಯಾದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರಿನಲ್ಲಿದ್ದ ತನ್ನ ಜಾಗವನ್ನು ನೋಡಿ ವಾಪಸ್ ಊರಿಗೆ ತೆರಳಿದ್ದ ಮೈಸೂರು ಸುಬ್ರಹ್ಮಣ್ಯನಗರದ ಫೋಟೋ ಗ್ರಾಫರ್ ಜಗದೀಶ್(58ವ)ರವರು ನಾಪತ್ತೆಯಾಗಿರುವ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಕೃಷಿ ಜಮೀನಿನ ಉಸ್ತುವಾರಿ ವಹಿಸಿಕೊಂಡವರು ಜಗದೀಶ್ ಅವರನ್ನು ಕೊಲೆ ಮಾಡಿದ ಬಗ್ಗೆ ಮಾಹಿತಿ ಲಭಿಸಿದೆ.

ಮೈಸೂರು ಜಿಲ್ಲೆಯ ಸುಬ್ರಹ್ಮಣ್ಯನಗರದಲ್ಲಿ ಫೋಟೋಗ್ರಾಫರ್ ಆಗಿರುವ ಜಗದೀಶ್ ಅವರು ತನ್ನ ಪತ್ನಿ, ಮಗನೊಂದಿಗೆ ಅಲ್ಲೇ ವಾಸ್ತವ್ಯ ಹೊಂದಿದ್ದರು. ತಿಂಗಳಿಗೊಮ್ಮೆ ಪುತ್ತೂರು ಆರ್ಯಾಪು ಗ್ರಾಮದ ಕುಂಜೂರು ಪಂಜಾದಲ್ಲಿರುವ ಕೃಷಿ ಜಮೀನನ್ನು ನೋಡಲು ಮೈಸೂರಿನಿಂದ ಬಂದಿದ್ದರು. ಆ ಬಳಿಕ ಅವರು ಪುತ್ತೂರಿಗೆ ಮಧ್ಯಾಹ್ನ ಹೋಗಿ ಸಂಜೆ ಪುಳಿತ್ತಡಿಗೆ ಬಂದು ಅಲ್ಲಿಂದ ಮೈಸೂರಿಗೆ ಹೋಗಲೆಂದು ಒಮ್ಮೆ ಕಾರಿನಲ್ಲಿ ಸುಳ್ಯ ತನಕ ತೆರಳಿದ್ದರು, ಅಲ್ಲಿಂದ ಬಸ್‌ನಲ್ಲಿ ಮೈಸೂರಿಗೆ ಹೋಗುವುದಾಗಿ ತೆರಳಿದ್ದರೂ ಮೈಸೂರಿಗೆ ತಲುಪದ ಅವರು ನಾಪತ್ತೆಯಾಗಿದ್ದಾರೆ.

ಅವರ ಪತ್ನಿ ಶರ್ಮಿಳಾ ಅವರು ನ.19ರ ನಸುಕಿನ ಜಾವ ಗಂಡ ಜಗದೀಶ್ ಅವರಿಗೆ ಕರೆ ಮಾಡಿದಾಗ ಅವರ ಫೋನ್ ಸ್ವಿಚ್ ಆಫ್ ಆಗಿತ್ತು, ಈ ನಿಟ್ಟಿನಲ್ಲಿ ಅವರು ಮನೆ ಮಂದಿಗೆ ಗಂಡ ನಾಪತ್ತೆಯಾಗಿರುವ ಕುರಿತು ಮಾಹಿತಿ ನೀಡಿದ್ದರು, ಜಗದೀಶ್ ಅವರ ಸಹೋದರ ಮಂಗಳೂರಿನಲ್ಲಿರುವ ಶಶಿಧರ್ ಎಂಬವರು ಪುತ್ತೂರು ಸಂಪ್ಯ ಪೊಲೀಸರಿಗೆ ಜಗದೀಶ್ ಅವರು ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದರು.

ಈ ಬಗ್ಗೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಸ್ ಐ ಉದಯ ರವಿ ಅವರ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತೋಟದ ಮೇಲ್ವಿಚಾರಕ ಸುಬ್ಬಣ್ಣ ಎಂಬವರನ್ನು ತನಿಖೆ ನಡೆಸಿದಾಗ ವಾಸ್ತವ ಬಯಲಾಗಿದೆ. ಹಾಗು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!