Friday, April 26, 2024
Homeತಾಜಾ ಸುದ್ದಿನಾಯಿಗಳ ಪ್ರೀತಿ ವಾತ್ಸಲ್ಯದ ಕಥೆ!..ಕಣ್ಣಿಲ್ಲದ ಒಡಹುಟ್ಟಿದವನನ್ನು ಕಾಪಾಡುವ ನಾಯಿ

ನಾಯಿಗಳ ಪ್ರೀತಿ ವಾತ್ಸಲ್ಯದ ಕಥೆ!..ಕಣ್ಣಿಲ್ಲದ ಒಡಹುಟ್ಟಿದವನನ್ನು ಕಾಪಾಡುವ ನಾಯಿ

spot_img
- Advertisement -
- Advertisement -

ಚೀನಾ: ಮನುಷ್ಯ ತನ್ನ ಒಡಹುಟ್ಟಿದವರನ್ನು ನಂಬದ ಈ ಕಾಲದಲ್ಲಿ ನಾಯಿಗಳ ಪ್ರೀತಿ ವಾತ್ಸಲ್ಯದ ಕಥೆಯೊಂದು ಇಂಥವರನ್ನು ಮನ ಕಲಕುವಂತೆ ಮಾಡುತ್ತದೆ. ಈ ನಾಯಿಗಳಿರುವುದು ಚೀನಾದಲ್ಲಿ. ಐದು ವರ್ಷ ವಯಸ್ಸಿನ ಡಾ ಬೋ ಮತ್ತು ಜು ಬೋ ಒಡ ಹುಟ್ಟಿದ ನಾಯಿಗಳು.

ಈ ಡಾಬೋ ಹೆಸರಿನ ನಾಯಿಗೆ ಹುಟ್ಟಿದಾಗಿನಿಂದಲೂ ಕಣ್ಣಿಲ್ಲ. ಆದರೆ ಈ ನಾಯಿಗೆ ಕಣ್ಣಾಗಿ ಕಾಯುವುದು ಒಡಹುಟ್ಟಿದ ಜು ಬೋ.ಜು ಬೋ ಯಾರಾದರೂ ಅಪರಿಚಿತರು ತನ್ನ ಒಡ ಹುಟ್ಟಿದನವನಿಗೆ ತೊಂದರೆ ನೀಡಬಹುದೆಂದು ಮನುಷ್ಯರೊಂದಿಗೂ ಅಷ್ಟು ಬೆರೆಯುವುದಿಲ್ಲ. ಈ ಕಣ್ಣಿಲ್ಲದ ನಾಯಿ ಬೆಂಚ್‌ವೊಂದರ ಮೇಲೆ ಹತ್ತಿವೆ.

ಆದರೆ ಇಳಿಯಲು ತಿಳಿಯದೇ ಪರಿತಪಿಸುತ್ತಿತ್ತು. ಅದು ಇಳಿಯಲು ಜೋ ಬೋ ಸಹಕರಿಸಿದೆ. ಈ ಪರಿಶುದ್ಧ ಪ್ರೀತಿಯ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ಕಣ್ಣಿಲ್ಲದ ಒಡಹುಟ್ಟಿದವನನ್ನು ಕಾಪಾಡುವ ನಾಯಿಯಾ ಪ್ರೀತಿಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

- Advertisement -
spot_img

Latest News

error: Content is protected !!